ETV Bharat / state

ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರದ ಕಟ್ಟೆ ತೆರವು - ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿನೆ

ಸಿದ್ದೇಶ್ವರ ಶ್ರೀಗಳ ಚಿತಾ ಭಸ್ಮ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ತ್ರಿವೇಣಿ ಸಂಗಮ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿನೆ - ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರ ಕಟ್ಟೆ ತೆರವು.

siddeshwar-sri-funeral-is-cleared
ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರ ಕಟ್ಟೆ ತೆರವು
author img

By

Published : Jan 9, 2023, 6:05 PM IST

ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರ ಕಟ್ಟೆ ತೆರವು

ವಿಜಯಪುರ: ನಡೆದಾಡುವ ದೇವರು ಜ್ಞಾನಯೋಗಾಶ್ರಮದ ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಾಣ ಮಾಡಿದ್ದ ಕಟ್ಟೆ ಇಂದು ತೆರವುಗೊಳಿಸಲಾಗಿದೆ. ಯಾವುದೇ ಮಠ, ಮಂದಿರ ತಮ್ಮ ಹೆಸರಲ್ಲಿ ನಿರ್ಮಾಣ ಮಾಡಬಾರದು ಎಂದು ಶ್ರೀಗಳು 2014ರಲ್ಲಿ ಉಯಿಲು ಬರೆದಿದ್ದರು.

ಅದರಂತೆ ಜನವರಿ 2ರಂದು ಲಿಂಗೈಕ್ಯರಾದ ಶ್ರೀಗಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿತ್ತು. ನಂತರ 7 ದಿನದ ಕಾರ್ಯದಲ್ಲಿ ಅವರ ಚಿತಾಭಸ್ಮವನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಕೂಡಮ ಸಂಗಮ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲಾಗಿತ್ತು.

ಶ್ರೀಗಳ ಆಶಯದಂತೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಿಸಿದ್ದ ಕಟ್ಟೆಯೂ ತೆರವುಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಗೋಕರ್ಣದಿಂದ ಬಂದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಕಟ್ಟೆಯನ್ನು ತೆರವು ಮಾಡಲಾಗಿದೆ. ನಂತರ ಆಶ್ರಮದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳವನ್ನು ನೀರಿನಿಂದ ಶುಚಿಗೊಳಿಸುತ್ತಿದ್ದಾರೆ. ಇದರ ನಡುವೆಯೂ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಶ್ರಮ ಭೇಟಿ ನೀಡಿದವರು ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡಿ, ಕೆಲ ಹೊತ್ತು ಶ್ರೀಗಳ ನೆನಪಿನಲ್ಲಿ ಧ್ಯಾನ ಮಾಡುತ್ತಿದ್ದಾರೆ.

ಶ್ರೀಗಳು ಬರೆದ ಪತ್ರದಲ್ಲೇನಿತ್ತು: ನುಡಿದಮತೆ ನಡೆದು, ನಡೆದಂತೆ ನುಡಿದ ನಿಜಸಂತ 2014ರ ಗುರು ಪೂರ್ಣಿಮೆಯಂದು ತಮ್ಮ ಅಂತಿಮ ಅಭಿವಂದನ ಪತ್ರವನ್ನು ಬರೆದಿದ್ದರು. ಆ ಪತ್ರಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದರು. ಜನವರಿ ಎರಡರಂದು ಸಿದ್ದೇಶ್ವರ ಶ್ರೀಗಳು ಇಹ ಲೋಕ ತ್ಯಜಿಸಿದ್ದರು. ಅಂದು ವೈಕುಂಠ ಏಕಾದಶಿ ದಿನವಾಗಿದ್ದು, ಸ್ವರ್ಗದ ಎಲ್ಲ ಬಾಗಿಲುಗಳು ತೆರೆದಿರುತ್ತವೆ ಎಂದು ಹಿಂದೂ ಪೌರಾಣಿಕ ನಂಬಿಕೆ ಜನರಲ್ಲಿ ಮನೆ ಮಾಡಿದೆ.

ಅವರ ಪತ್ರದಲ್ಲಿ ದೇಹದ ವಿಷಯದಲ್ಲಿ ಒಂದೆರಡು ಆಶಯಗಳು. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿ ಅರ್ಪಿತ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು ಎಂದು ಉಲ್ಲೇಖಿಸಿದ್ದರು.

ಅಂತಿಮ ನೆನಹು: 'ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು'. ಅಂತ್ಯಃ ಪ್ರಣಾಮಾಂಜಲಿಃ! ಎಂದು ಅಭಿವಂದನಾ ಪತ್ರವನ್ನು ಶ್ರೀಗಳು ಬರೆದಿದ್ದು, ಪತ್ರದ ಕೊನೆಯಲ್ಲಿ ನ್ಯಾಯಾಧೀಶರು ಸಹಿ ಹಾಕಿದ್ದಾರೆ.

ವಿಮಾನ ನಿಲ್ದಾಣಕ್ಕೆ ಶ್ರೀಗಳ ಹೆಸರಿಡಿ: ವಿಜಯಪುರದ ಬುರಣಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕೆ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಹೆಸರು ನಾಮಕರಣ ಮಾಡಬೇಕು ಎಂದು ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಜಯ ಕರ್ನಾಟಕದಿಂದ ಆಗ್ರಹಿಸಲಾಯಿತು.‌

ಶ್ರೀಗಳು ಪ್ರವಚನಗಳ ಮೂಲಕ ಜೀವನ ಪಾಠ, ಶಾಂತಿಬೋಧನೆ, ಸರಳ ಜೀವನ, ಜೀವನ ಶೈಲಿ ಹೇಳಿಕೊಟ್ಟಿದ್ದಾರೆ. ಶ್ರೇಷ್ಠ ಸಂತರೆನಿಸಿಕೊಂಡಿರುವ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಹೆಸರು ನಾಮಕರಣ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ನಿಲ್ದಾಣಕ್ಕೆ ಶ್ರೀಗಳ ಹೆಸರು ಇಡುವ ಮೂಲಕ ಜಿಲ್ಲೆಯಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೂಡಲಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.