ವಿಜಯಪುರ: ಗಡಿ ಭಾಗದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದ ಹಿನ್ನೆಲೆ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವಂತೆ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಚೀನಾ ಸೈನಿಕರ ದಾಳಿಯನ್ನು ಇಡೀ ದೇಶದ ಜನರು ವಿರೋಧಿಸುತ್ತಿದ್ದಾರೆ. ಅಲ್ಲದೇ ಚೀನಾದಿಂದ 30% ವಸ್ತುಗಳನ್ನು ಮಾತ್ರ ಭಾರತ ಆಮದು ಮಾಡಿಕೊಳ್ಳುತ್ತಿದೆ. ಅವುಗಳನ್ನು ಸರ್ಕಾರ ನಿರ್ಬಂಧಿಸುವಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
ಚೀನಿಯರ ಆಕ್ರಮಣದಿಂದ ಹುತಾತ್ಮರಾದ ಸೈನಿಕರಿಗೆ ನ್ಯಾಯ ಸಿಗಬೇಕಾದ್ರೆ ಚೀನಾಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಲು ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೀನಾ ವಸ್ತುಗಳ ಬಳಕೆಗೆ ಸರ್ಕಾರ ತಡೆ ನೀಡಬೇಕು. ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದ ಪ್ರತೀ ವಸ್ತುಗಳನ್ನು ಜನರು ಬಹಿಷ್ಕಾರ ಮಾಡಿ ದೇಶಿ ವಸ್ತುಗಳನ್ನು ಬಳಸುವಂತೆ ಸೂಚಿಸಿ ಜಿಲ್ಲಾಧಿಕಾರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.