ETV Bharat / state

ಸೀಲ್​ಡೌನ್​ ಎಫೆಕ್ಟ್.. ಆ್ಯಂಬುಲೆನ್ಸ್​ನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ - Nedagundi Taluk of Vijayapur district

ತೀವ್ರ ಹೆರಿಗೆ ನೋವಿನಿಂದ ‌ಬಳಲುತ್ತಿದ್ದ ಬೇನಾಳ ಗ್ರಾಮದ ಕವಿತಾ ರಮೇಶ ತಳವಾರ ಅವರನ್ನು 108 ಆ್ಯಂಬುಲೆನ್ಸ್‌ನಲ್ಲಿ ಇಂದು ಹೆರಿಗೆಗೆಂದು ತಾಲೂಕಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ..

Seal Down Effect: mother gave  birth to child in ambulance
ಸೀಲ್​ಡೌನ್​ ಎಫೆಕ್ಟ್​: ಆ್ಯಂಬುಲೆನ್ಸ್​ನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ
author img

By

Published : Jul 5, 2020, 4:35 PM IST

ವಿಜಯಪುರ : ಹೆರಿಗೆಗೆಂದು ಆಸ್ಪತ್ರೆ ಅರಸಿ ಹೊರಟ ಗರ್ಭಿಣಿಯ ಹೆರಿಗೆ ಆ್ಯಂಬುಲೆನ್ಸ್​ನಲ್ಲೇ ಆಗಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್ ಎಸ್ ಗ್ರಾಮದಲ್ಲಿ ನಡೆದಿದೆ.

ತೀವ್ರ ಹೆರಿಗೆ ನೋವಿನಿಂದ ‌ಬಳಲುತ್ತಿದ್ದ ಬೇನಾಳ ಗ್ರಾಮದ ಕವಿತಾ ರಮೇಶ ತಳವಾರ ಅವರನ್ನು 108 ಆ್ಯಂಬುಲೆನ್ಸ್‌ನಲ್ಲಿ ಇಂದು ಹೆರಿಗೆಗೆಂದು ತಾಲೂಕಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಆಸ್ಪತ್ರೆ ಸೀಲ್‌ಡೌನ್ ಆಗಿರುವ ವಿಚಾರ ತಿಳಿದು ಬಂದಿದೆ.

ಈ ಹಿನ್ನೆಲೆ ಬೇರೆ ಆಸ್ಪತ್ರೆ ಹುಡುಕಿ ಹೋಗುತ್ತಿದ್ದ ಗರ್ಭಿಣಿಗೆ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದೆ. ಆಕೆ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. ಹೆರಿಗೆ ನಂತರ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಮಗು, ತಾಯಿ ಆರೋಗ್ಯದಿಂದ ಇದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.