ವಿಜಯಪುರ:ಕಲಬುರಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಿಂದಗಿ ತಾಲೂಕಿನ ಯರಗಲ್ಲ ಬಿ.ಕೆ.ಗ್ರಾಮದ ಕಾಲುವೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವಿಗೀಡಾಗಿದ್ದಾರೆ. ಮೃತರನ್ನು ದೇವರಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದ ಮಹಾಂತೇಶ ಕಾಸಣ್ಣ ಹಡಪದ (27), ಸದ್ದಾಂ ಬಂದಗಿಸಾ ಬ ನಾಯ್ಕೋಡಿ (27), ಹಂಚಲಿ ಗ್ರಾಮದ ಮಂಜುನಾಥ ದೇವಪ್ಪ ದೊಡ್ಡಮನಿ (24)ಎಂದು ಗುರುತಿಸಲಾಗಿದೆ.
ವಿಜಯಪುರ - ಕಲಬುರಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ರಾತ್ರಿ ಜೇವರ್ಗಿಯತ್ತ ಹೊರಟಿದ್ದ ಟ್ಯಾಂಕರ್ವು ಸಿಂದಗಿಯತ್ತ ಹೊರಟಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಮೇಲಿದ್ದ ಮೂವರು ಸವಾರರು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದನು. ಆತನು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗದ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ರು ತಿಳಿಸಿದ್ದಾರೆ.
ಘತ್ತರಗಿ ಶ್ರೀ ಭಾಗ್ಶವಂತಿ ದೇವಿ ದರ್ಶನಕ್ಕೆ ಹೋಗಿದ್ದ ಯುವಕರು:ಇಂದು ಬೈಕ್ ಸವಾರರು ಅಮವಾಸ್ಶೆ ನಿಮಿತ್ತ ಅಫಜಲಪೂರ ತಾಲೂಕಿನ ಘತ್ತರಗಿ ಶ್ರೀ ಭಾಗ್ಶವಂತಿ ದೇವಿ ದರ್ಶನಕ್ಕೆ ಹೋಗಿದ್ದರು.ಘತ್ತರಗಿ ಶ್ರೀ ಭಾಗ್ಶವಂತಿ ದೇವಿ ದರ್ಶನ ಪಡೆದು ಬೈಕ್ ಸವಾರರು ಮರಳಿ ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿ ಅಪಘಾತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
24 ಲಕ್ಷ ರೂಪಾಯಿ ಗದಗ ಪೊಲೀಸರಿಂದ ಜಪ್ತಿ: ಸೂಕ್ತ ದಾಖಲೆ ಇಲ್ಲದೇ ಕೊಂಡೊಯ್ಯುತ್ತಿದ್ದ 24 ಲಕ್ಷ ರೂಪಾಯಿ ನಗದನ್ನು ಗದಗ ಪೊಲೀಸರು ಜಪ್ತಿ ಮಾಡಿದ್ದಾರೆ. ಸೋಮವಾರ ರಾತ್ರಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದು, ಮುಳಗುಂದ ಚೆಕ್ ಪೋಸ್ಟ್ನಲ್ಲಿ ಪತ್ತೆಯಾಗಿದೆ.
''ದಾವಣಗೆರೆಯಿಂದ ಗದಗ ಕಡೆಗೆ ಪ್ರಯಾಣಿಕರು ಕಾರ್ನಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 24 ಲಕ್ಷ ರೂಪಾಯಿ ಸೀಜ್ ಮಾಡಲಾಗಿದೆ. ಹಣ ಯಾರದ್ದು ಮತ್ತು ಯಾವ ಕಾರಣಕ್ಕೆ ಬಳಸಿಕೊಳ್ಳಲು ಯೋಚಿಸಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ವಾಹನ, ಆಸ್ತಿ ಖರೀದಿಗೆ ಹಣ ತೆಗೆದುಕೊಂಡು ಹೊರಟಿದ್ದೇವೆ ಎಂದು ಕಾರ್ನಲ್ಲಿದ್ದವರು ಹೇಳುತ್ತಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಹಣ ಸೀಜ್ ಮಾಡಿದ್ದೇವೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದರು.
ಅನುಮಾನಾಸ್ಪದವಾಗಿ ಕಾರು ನಿಲ್ಲಿಸಿಕೊಂಡು 10 ಲಕ್ಷ ಹಣವನ್ನು ಎಣಿಕೆ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಜ.13ರಂದು ನಡೆದಿತ್ತು. ಕೆಎ 52 ಎನ್ 0603 ಇನೋವಾ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ನಿರ್ಜನ ಪ್ರದೇಶದಲ್ಲಿ ಕುಳಿತು ಕಂತೆ ಕಂತೆ ನೋಟು ಲೆಕ್ಕ ಮಾಡುತ್ತಿದ್ದರು. ರೌಂಡ್ಸ್ನಲ್ಲಿದ್ದ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂಓದಿ:ಐಫೋನ್ ಸೇರಿ ದುಬಾರಿ ಫೋನ್ಗಳನ್ನು ಕದ್ದು ತೆಲಂಗಾಣಕ್ಕೆ ಸಾಗಣೆ: ಮೂವರ ಬಂಧನ, 40 ಲಕ್ಷ ಮೌಲ್ಯದ ಮೊಬೈಲ್ ವಶ