ಮುದ್ದೇಬಿಹಾಳ(ವಿಜಯಪುರ) : ಗಣೇಶ ಚತುರ್ಥಿ ಮತ್ತು ಶ್ರೀ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ತಾಳಿಕೋಟೆ ತಾಲೂಕಿನ ಸುಕ್ಷೇತ್ರ ಭಂಟನೂರ ಗ್ರಾಮದಲ್ಲಿ ಭಾರ ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ 150 ಕೆ.ಜಿ. ಭಾರವಾದ ಚೀಲವನ್ನು ತಾಳಿಕೋಟಿ ತಾಲೂಕಿನ ನಾಗೂರ ಗ್ರಾಮದ ಶಿವರಾಜ್ ಗುಂಡಕನಾಳ ಎತ್ತುವ ಮೂಲಕ ಸಾಧನೆ ತೋರಿದರು. 140 ಕೆ.ಜಿ ಭಾರದ ಗುಂಡು ಕಲ್ಲನ್ನು ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಪರಶುರಾಮ ಯರನಾಳ ಎತ್ತಿದರು. ತಾಳಿಕೋಟೆ ತಾಲೂಕಿನ ಬಂಟನೂರ ಗ್ರಾಮದ ಪೈಲ್ವಾನ್ ಹನುಮಂತರಾಯ ವಾಲಿಕಾರ 100 ಕೆ.ಜಿ. ತೂಕದ ಚೀಲವನ್ನು ಬೆನ್ನ ಮೇಲೆ ಹೊತ್ತು ದೀಡ್ ನಮಸ್ಕಾರ ಹಾಕಿದರು.
ಇದನ್ನೂ ಓದಿ: ಯತ್ನಾಳ್ಗೆ ಕರೆ ಮಾಡಿ ಸಿಎಂ ಬೊಮ್ಮಾಯಿ ಹೇಳಿದ್ದೇನು?
ವಿಜೇತ ಜಟ್ಟಿಗಳಿಗೆ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಹಾಗೂ ಊರಿನ ಹಿರಿಯರು ಮತ್ತು ಜಟ್ಟಿಂಗೇಶ್ವರ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.