ETV Bharat / state

ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಲೇ ಯಾರಾದ್ರೂ ದಲಿತ ಸಿಎಂ ಆಗುವುದು‌ ನಿಶ್ಚಿತ: ರಮೇಶ್​​​ ಜಿಗಜಿಣಗಿ

ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಲೇ ಯಾರಾದರೂ ದಲಿತ ಸಿಎಂ ಆಗುವುದು‌ ನಿಶ್ಚಿತ. ಅದು ನಾನು ಇರುವಾಗ ಆಗುತ್ತದೆಯೋ ಅಥವಾ ನಾನು ಮೃತಪಟ್ಟ ನಂತರ ಆಗುತ್ತಾರೋ ಗೊತ್ತಿಲ್ಲ ಎಂದು ಸಂಸದ ರಮೇಶ್​ ಜಿಗಜಿಣಗಿ ಹೇಳಿದರು.

Ramesh Jigajinagi
ರಮೇಶ ಜಿಗಜಿಣಗಿ
author img

By

Published : Jan 30, 2020, 2:46 PM IST

ವಿಜಯಪುರ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್​ ಜಿಗಜಿಣಗಿ

ಸಿಎಎ ಬೆಂಬಲಕ್ಕಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಸರ್ಕಾರದ ಸುಸ್ಥಿರತೆಗಾಗಿ ಹಾಲಿ ಸಚಿವರು, ಕೆಲ ಶಾಸಕರ ತ್ಯಾಗ‌ ಮಾಡುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಪಕ್ಷದವರು ಯಾರೂ ಹೇಳಿಲ್ಲ. ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ, ಯತ್ನಾಳ್ ಇವರೆಲ್ಲಾ ಪಕ್ಷದ ನಾಯಕರಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಣಯ ಮಾಡುತ್ತಾರೆ. ತ್ಯಾಗ ಮಾಡುವ ಪರಿಸ್ಥಿತಿ ಬಂದರೆ ಎಲ್ಲರೂ ತ್ಯಾಗ ಮಾಡುತ್ತಾರೆ ಎಂದರು.

ದಲಿತ ಸಿಎಂ ನಿಶ್ಚಿತ: ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದಲೇ ಯಾರಾದರೂ ದಲಿತ ಸಿಎಂ ಆಗುವುದು‌ ನಿಶ್ಚಿತ. ಅದು ನಾನು ಇರುವಾಗ ಆಗುತ್ತದೆಯೋ ಅಥವಾ ನಾನು ಮೃತಪಟ್ಟ ನಂತರ ಆಗುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.

ಇನ್ನು ಶ್ರೀರಾಮುಲು ಹಾಗೂ ರಮೇಶ್​ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಕೊಡುವ ಬಗ್ಗೆ ಮಾತನಾಡಿ, ನಮ್ಮನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡೀರಿ ಎಂದು ರಾಮುಲು ಹೇಳ್ತಾರೆ. ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ರಮೇಶ್​​ ಜಾರಕಿಹೋಳಿ ಹೇಳ್ತಾರೆ. ಈ ವಿವಾದಗಳು ನಡೆಯುವುದೇ, ಇವೆಲ್ಲ ಹೊಸದೇನಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.