ETV Bharat / state

ರಾಜು ತಾಳಿಕೋಟೆಗೆ ಗನ್ ತೋರಿಸಿ ಬೆದರಿಸಿದ್ದೆ ಎಂಬುದೆಲ್ಲ ಸುಳ್ಳು: ನಟನ ಸಂಬಂಧಿ ಶೇಖ್ ಮೋದಿ ಸ್ಪಷ್ಟನೆ

ಹಾಸ್ಯನಟ ರಾಜು ತಾಳಿಕೋಟೆ ಮೇಲಿನ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ನಾವು ಹಲ್ಲೆ ಮಾಡಿಯೇ ಇಲ್ಲ. ನಮ್ಮ ಮೇಲೆಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರ ಸಂಬಂಧಿಕರು ಪ್ರತ್ಯಾರೋಪ ಮಾಡಿದ್ದಾರೆ.

raju-talikote-relative-react-about-assault-case
ರಾಜು ತಾಲೀಕೋಟೆ ಹಲ್ಲೆ ಪ್ರಕರಣ
author img

By

Published : Sep 15, 2021, 2:29 PM IST

Updated : Sep 15, 2021, 4:29 PM IST

ವಿಜಯಪುರ: ಹಾಸ್ಯನಟ ರಾಜು ತಾಳಿಕೋಟೆ ಮೇಲಿನ ಹಲ್ಲೆ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಸಂಬಂಧಿ ಶೇಖ್ ಮೋದಿ, ರಾಜು ಅವರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದೆ ಎಂಬುದೆಲ್ಲ ಸುಳ್ಳು. ನನ್ನ ಬಳಿ ಲೈಸೆನ್ಸ್ ಹೊಂದಿರೋ ರಿವಾಲ್ವರ್ ಇದೆ. ನಾನು ರಾಜು ತಾಳಿಕೋಟೆಗೆ ಯಾವುದೇ ರೀತಿ ಬೆದರಿಕೆ ಹಾಕಿಲ್ಲ ಎಂದಿದ್ದಾರೆ.

ರಾಜು ತಾಳಿಕೋಟೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ರಾಜು ತಾಳಿಕೋಟೆ ಅವರ ಮೂವರು ಸೊಸೆಯಂದಿರು ಈಗಾಗಲೇ ಅವರನ್ನು ಬಿಟ್ಟು ಹೋಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

ರಾಜು ತಾಳಿಕೋಟೆಗೆ ಗನ್ ತೋರಿಸಿ ಬೆದರಿಸಿದ್ದೆ ಎಂಬುದೆಲ್ಲ ಸುಳ್ಳು: ನಟನ ಸಂಬಂಧಿ ಶೇಖ್ ಮೋದಿ ಸ್ಪಷ್ಟನೆ

ಇದೇ ವೇಳೆ, ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸನಾಳ‌ ಸಹೂದರಿ ಪರೀದಾ ಮೋದಿ ಮಾತನಾಡಿ, ರಾಜು ತಾಳಿಕೋಟೆ ಹಾಗೂ ಆತನ ಕುಟುಂಬಸ್ಥರು ಸೇರಿ ನನ್ನ ತಂಗಿಗೆ ವಿಷ ಕುಡಿಸಿದ್ದಾರೆ. ನಾವು ಈ ಹಿಂದೆಯೇ ರಾಜು ತಾಳಿಕೋಟೆ ಕುಟುಂಬದ ವಿರುದ್ಧ ಮುಧೋಳ ಠಾಣೆಯಲ್ಲಿ ದೂರು ನೀಡಿದ್ದೇವೆ. ಇದೀಗ ಮತ್ತೆ ಕೌಟುಂಬಿಕ ಕಲಹ ಉಂಟಾಗಿ ಗಲಾಟೆಯಾಗಿದೆ. ರಾಜು ತಾಳಿಕೋಟೆ ನನ್ನ ತಾಯಿ ಹಾಗೂ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು ರಾಜು ತಾಳಿಕೋಟೆ ನನ್ನ ಮೇಲೆ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದು. ಕೌಟುಂಬಿಕ ಕಲಹ ಹಿನ್ನೆಲೆ ಗಲಾಟೆ ನಡೆದು ಗನ್​ ತೋರಿಸಿ ಬೆದರಿಸಿದ್ದರು ಎಂದು ಆರೋಪಿಸಿದ್ದರು.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಎಸ್​​ಪಿ ಆನಂದ್ ಕುಮಾರ್

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಎಸ್​​ಪಿ ಆನಂದ್ ಕುಮಾರ್, ರಾಜು ತಾಳಿಕೋಟೆ ಹಾಗೂ ಅವರ ಸಂಬಂಧಿಕರ ಮೇಲೂ ಸಹ ಒಂದು ಕೇಸು ದಾಖಲಾಗಿದೆ. ಇದೊಂದು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಡೆದಿರುವ ಘಟನೆಯಾಗಿದೆ. ಈ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರು ಯಾರು ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದಿದ್ದಾರೆ.

ಇದನ್ನೂ ಓದಿ: ನಟ ರಾಜು ತಾಳಿಕೋಟೆ ಕೌಟುಂಬಿಕ ಕಲಹ: ದೂರು-ಪ್ರತಿದೂರು ದಾಖಲು

Last Updated : Sep 15, 2021, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.