ವಿಜಯಪುರ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಟಾವಿಗೆ ಬಂದ ಕಬ್ಬಿನ ಬೆಳೆ ನೆಲಸಮಗೊಂಡ ಘಟನೆ ಇಂಡಿ ತಾಲೂಕಿನ ವಾಡೇ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ, ಗಾಳಿಯ ಪರಿಣಾಮ 3 ಎಕರೆ ಪ್ರದೇಶದಲ್ಲಿನ ಕಬ್ಬಿನ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು, ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ವಾಡೇ ಗ್ರಾಮದ ರೈತ ಪಂಡಿತ ನಾಗಪ್ಪ ಅವಟಿ ಎಂಬುವರಿಗೆ ಸೇರಿದ ಬೆಳೆಯಾಗಿದ್ದು, ಸಾಲ ಸೂಲ ಮಾಡಿ ವರ್ಷವಿಡೀ ಬೆಳೆದ ಬೆಳೆ ನೆಲಕ್ಕೆ ಉರಳಿದ್ದು ರೈತನ ಆತಂಕಕ್ಕೆ ಕಾರಣವಾಗಿದೆ.