ETV Bharat / state

ಕಾಯ್ದಿರಿಸಿದ ಮತಯಂತ್ರಗಳ ಗೊಂದಲ: ಕಾರಜೋಳ ಗ್ರಾಮಸ್ಥರ ಪ್ರತಿಭಟನೆ - karnataka assembly election result

ಕಾರಜೋಳ ಗ್ರಾಮಸ್ಥರು ಕಾಯ್ದಿರಿಸಿದ್ದ ಮತಯಂತ್ರಗಳ ಸಾಗಾಟ ಸಂದರ್ಭದಲ್ಲಿ ಅಧಿಕಾರಿಗಳನ್ನು ತಡೆದು ಪ್ರತಿಭಟಿಸಿದರು.

ಕಾರಜೋಳದಲ್ಲಿ ಪ್ರತಿಭಟನೆ
ಕಾರಜೋಳದಲ್ಲಿ ಪ್ರತಿಭಟನೆ
author img

By

Published : May 11, 2023, 7:13 AM IST

ಗ್ರಾಮಸ್ಥರಿಗೆ ಅಧಿಕಾರಿಗಳ ಮನವರಿಕೆ

ವಿಜಯಪುರ: ಕಾಯ್ದಿರಿಸಿದ ಮತಯಂತ್ರಗಳ ಕುರಿತು ಗೊಂದಲ ಉಂಟಾಗಿ ಜನರು ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ (ಬುಧವಾರ) ರಾತ್ರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮದಲ್ಲಿ ನಡೆಯಿತು. ಗ್ರಾಮದಲ್ಲಿ ಕಾಯ್ದಿಟ್ಟ ಮತಯಂತ್ರಗಳನ್ನು ಸಾಗಿಸುತ್ತಿದ್ದಾಗ ಗ್ರಾಮಸ್ಥರು ತಡೆದರು. ಮತದಾನ ಮುಗಿದ ಬಳಿಕ ಚುನಾವಣಾ ಸಿಬ್ಬಂದಿ ವಿಜಯಪುರಕ್ಕೆ ಇವಿಎಂ, ವಿವಿಪ್ಯಾಟ್‌ ಮಶಿನ್‌ಗಳನ್ನು ವಿಜಯಪುರ ನಗರದ ಸೈನಿಕ ಶಾಲೆಯ ಸ್ಟ್ರಾಂಗ್ ರೂಮ್​ಗೆ ಸಾಗಿಸುವಾಗ ಗ್ರಾಮಸ್ಥರು ಅಡ್ಡಿಪಡಿಸಿದರು.

ಕಾಯ್ದಿಟ್ಟ ಮತಯಂತ್ರಗಳನ್ನು ನಕಲಿ ಮತಯಂತ್ರಗಳಂದು ಗ್ರಾಮಸ್ಥರು ಅನಮಾನ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಗಳು ಮನವರಿಕೆ ಮಾಡಿದರೂ ಗ್ರಾಮಸ್ಥರು ಪಟ್ಟು ಸಡಿಸಲಿಲ್ಲ. ಒಂದು ವೇಳೆ ತಾಂತ್ರಿಕ ದೋಷ ಕಂಡುಬಂದಾಗ ಕೂಡಲೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲು ಕಾಯ್ದಿಟ್ಟ ಮತಯಂತ್ರ ತರಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿ ಹೇಳಿದರು. ಸ್ಥಳಕ್ಕೆ ಜಿಲ್ಲಾ ಚುನಾವಣಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮತಯಂತ್ರ ಸಾಗಿಸಲು ಗ್ರಾಮಸ್ಥರು ಅನುವು ಮಾಡಿಕೊಟ್ಟರು.

ಇವಿಎಂ ಮಶಿನ್ ಪುಡಿ: ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದು ಅಧಿಕಾರಿಗಳು ಮತದಾನ ಕಾರ್ಯ ಸ್ಥಗಿತಗೊಳಿಸಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ವಾಪಸ್ ಕೊಂಡೊಯ್ಯುತ್ತಿದ್ದರು. ಮೀಸಲಿಡಲಾಗಿದ್ದ ಮಶಿನ್‌ಗಳನ್ನೂ ತೆಗೆದುಕೊಂಡು ಹೋಗುವುದನ್ನು ಗಮನಿಸಿದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಸರಿಯಾಗಿ ಉತ್ತರಿಸಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡು ಜನರು ಮತಯಂತ್ರಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಅಧಿಕಾರಿಗಳ ಕಾರನ್ನೂ ಜಖಂಗೊಳಿಸಿ, ಸಿಬ್ಬಂದಿಗೆ ಥಳಿಸಿದ್ದಾರೆ.

ಇದನ್ನೂ ಓದಿ: ಸುಗಮವಾಗಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ; ರಾಜ್ಯದ ಒಟ್ಟು ಮತಪ್ರಮಾಣದಲ್ಲಿ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.