ವಿಜಯಪುರ: ಬಾಕಿ ಬಿಲ್ ಕಟ್ಟದ್ದಕ್ಕೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಬಿಟ್ಟುಕೊಡದ ಅಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತನ ಸಂಬಂಧಿಕರು ಆಸ್ಪತ್ರೆ ಎದುರೇ ಭಿಕ್ಷೆ ಎತ್ತಿ ಪ್ರತಿಭಟನೆ ನಡೆಸಿದರು.
ನಗರದ ಬಜಾರ್ ಕ್ರಾಸ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕಳೆದ 18 ದಿನಗಳ ಹಿಂದೆ ಕೊರೊನಾ ರೋಗಿಯೊಬ್ಬರು ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಆಸ್ಪತ್ರೆ ಬಿಲ್ 4.80 ಲಕ್ಷ ರೂ. ಪಾವತಿಸಿದ್ದ ಕುಟುಂಬಸ್ಥರು, ಮೃತದೇಹ ಕೊಂಡೊಯ್ಯಲು ಮುಂದಾಗಿದ್ದರು. ಆದರೆ, ಬಾಕಿ ಬಿಲ್ 2.70 ಲಕ್ಷ ರೂ. ಕಟ್ಟಿ ಮೃತದೇಹ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯವರು ತಿಳಿಸಿದ್ದಾರೆ ಎನ್ನಲಾಗ್ತಿದೆ.
ಹೀಗಾಗಿ, ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ಬಡ ಜನರಿಂದ ಹಣ ಪೀಕುತ್ತಿದೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಎದುರೇ ಭಿಕ್ಷೆ ಎತ್ತಿ ಆಕ್ರೋಶ ವ್ಯಕ್ತಪಡಿಸಿದರು.