ವಿಜಯಪುರ: ಭೂ ಸುಧಾರಾಣೆ ಕಾಯ್ದೆ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಎಸ್‌ಯುಸಿಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸರ್ಕಾರದ ವಿರುದ್ಧವಾಗಿ ಘೋಷಣೆ ಕೂಗಿ, ಸರ್ಕಾರದ ಭೂ ಸುಧಾರಾಣಾ ಕಾಯ್ದೆ ತಿದ್ದುಪಡಿಯಿಂದ ರೈತರ ಕಣ್ಣಿಗೆ ಸುಣ್ಣ ಹಾಕುವ ಕಾರ್ಯಕ್ಕೆ ಮುಂದಾಗುತ್ತಿದೆ. ಕೊರೊನಾ ವೈಸರ್ ಭೀತಿ, ಲಾಕ್‌ಡೌನ್ ಎಫೆಕ್ಟ್ನಿಂದ ರೈತರು ತತ್ತರಿಸಿದ್ದಾರೆ. ಸರ್ಕಾರ ರೈತರ ನೆರವಿಗೆ ನಿಲ್ಲುವುದನ್ನು ಬಿಟ್ಟು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರ ಭೂಮಿಯನ್ನೇ ಕಾರ್ಪೊರೇಟ್ ಕಪಿಮುಷ್ಠಿಗೆ ಹಾಕುವ ಕಾರ್ಯಕ್ಕೆ ಮುಂದಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇನ್ನು ಕೃಷಿ ಭೂಮಿಗೆ ಕಾರ್ಪೊರೇಟ್ ಕಂಪನಿಗಳ ಮುಕ್ತ ಸರ್ಕಾರ ಮಾಡುವುರಿಂದ ರೈತರ ಕೃಷಿ ಭೂಮಿಗಳಿಂದ ಕಂಪನಿಗಳು ಹೋಟೆಲ್, ಮೋಜು ಮಸ್ತಿ ಕೇಂದ್ರ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳುವುದರಿಂದ ರೈತರ ಕೃಷಿ ಉತ್ಪಾದನೆ ಕಡಿಮೆಯಾಗತ್ತದೆ.
ಇನ್ನು ದೇಶವೇ ಕೊರೊನಾ ವೈರಸ್ ಭೀತಿಗೆ ತತ್ತರಿಸಿರುವಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಮಾರಕವಾಗುವಂತಹ ಕಾಯ್ದೆಯಲ್ಲಿ ಮುಳುಗಿದ್ದು ಭೂ ಸುಧಾರಣೆ ಕಾಯ್ದೆಯ ಕಲಂ 79 ಎ, ಬಿ ಮತ್ತು ಸಿ ಹಾಗೂ 80 ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದುಗೊಳಿಸುವುದನ್ನು ಸರ್ಕಾರ ಹಿಂಪಡೆಯುವಂತೆ ಒತ್ತಾಯಿಸಿ ಎಸ್‌ಯುಸಿಐ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.