ETV Bharat / state

ಖಾಸಗಿ ಆಸ್ಪತ್ರೆಗಳಿಂದ ಹಗಲು ದರೋಡೆ ಆರೋಪ: ಕಡಿವಾಣಕ್ಕೆ ಸಾರ್ವಜನಿಕರ ಆಗ್ರಹ

ಕೋವಿಡ್​​ ಸೋಂಕಿತರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

daylight-robbery-from-covid-patients
ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ
author img

By

Published : Sep 2, 2020, 2:53 PM IST

ವಿಜಯಪುರ: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗಳು ಸಾಕಾಗುತ್ತಿಲ್ಲವೆಂದು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಇದು ಹೆಚ್ಚು ಹಣ ವಸೂಲಿಗೆ ಅವಕಾಶ ನೀಡಿದಂತಾಗಿದೆ ಎಂಬ ಆರೋಪಗಳು ಸೋಂಕಿತರ ಸಂಬಂಧಿಕರಿಂದ ಕೇಳಿ ಬರುತ್ತಿದೆ. ಆದರೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಇಲ್ಲದಿದ್ದರೂ ಜಿಲ್ಲಾಡಳಿತ ಕಮಿಟಿ ರಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಈವರೆಗೆ 6 ಸಾವಿರಕ್ಕಿಂತ ಅಧಿಕ ಜನರಿಗೆ ಸೊಂಕು ತಗುಲಿದೆ. ಜಿಲ್ಲಾಸ್ಪತ್ರೆಗಳಲ್ಲಿ ಬೆಡ್ ಇಲ್ಲದ ಕಾರಣ 12 ಖಾಸಗಿ ಆಸ್ಪತ್ತೆಗಳನ್ನು ಕೊವಿಡ್ ಕೇಂದ್ರವನ್ನಾಗಿ ಬದಲಿಸಲಾಗಿದೆ. ಸ್ವಲ್ಪ ಸ್ಥಿತಿವಂತ ರೋಗಿಗಳಿಗೆ ಇದು ಅನುಕೂಲವಾಗಿದೆ. ಆದರೆ ಲಕ್ಷಾಂತರ ಲೆಕ್ಕದಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಯಾರೂ ಅಧಿಕೃತ ದೂರು ಸಲ್ಲಿಸದಿದ್ದರೂ ಖಾಸಗಿ ಆಸ್ಪತ್ರೆಗಳು ಹಗಲು ದರೋಡೆಗೆ ನಿಂತಿವೆ ಎನ್ನುವದು ಮಾತ್ರ ಕಟು ಸತ್ಯವಾಗಿದೆ. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಿದರೆ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಕೆಲವು ಸ್ಥಿತಿವಂತರು ಜಿಲ್ಲಾಸ್ಪತ್ರೆಗಳ ಅವ್ಯವಸ್ಥೆ ಕಂಡು ಹಣ ಹೆಚ್ಚು ಖರ್ಚಾದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.

ಕೊರೊನಾ ಸೋಂಕಿತರಿಂದ ಹೆಚ್ಚು ಹಣ ವಸೂಲಿ ಆರೋಪ

ಮುಖ್ಯವಾಗಿ ಈ ರೋಗದ ಬಗ್ಗೆ ಹೆಚ್ಚು ಅರಿವು ಜನರಲ್ಲಿ ಇಲ್ಲ. ಪಾಸಿಟಿವ್ ಬಂದರೆ ನಮ್ಮ ಮನೆ ಸೀಲ್ ​ಡೌನ್ ಮಾಡುತ್ತಾರೆ ಎಂದು ಮರ್ಯಾದೆಗೆ ಹೆದರಿ ಆಸ್ಪತ್ರೆ ಎಷ್ಟೇ ಬಿಲ್ ಮಾಡಿದರೂ ಪರವಾಗಿಲ್ಲ ಎಂದು ಗುಪ್ತವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಖಾಸಗಿ ಆಸ್ಪತ್ರೆಗಳಿಗೆ ಹಣ ಮಾಡುವ ದಾರಿಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿವೆ ಎನ್ನುವುದು ಜಿಲ್ಲಾಡಳಿತಕ್ಕೆ ಮಾಹಿತಿ ಇದ್ದರೂ ಲಿಖಿತ ದೂರುಗಳಿಲ್ಲದ ಕಾರಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಯುಷ್ಮಾನ್​ ಆರೋಗ್ಯ ಅಭಿಯಾನದಡಿ ವೈದ್ಯರ ತಂಡ ರಚಿಸಿ ಕೈತೊಳೆದುಕೊಂಡಿದೆ. ಪ್ರತೀ ಬಾರಿ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ಕರೆದು ಬುದ್ಧಿವಾದ ಹೇಳುವ ಕೆಲಸ ಮಾಡುತ್ತಿದೆ. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಹಣ ವಸೂಲಿಗೆ ಕಡಿವಾಣ ಹಾಕಲು ಹೊಸ ಹೆಜ್ಜೆ ಇಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.