ETV Bharat / state

ಜಮೀನು ದಾರಿ ಸರಳೀಕರಣಕ್ಕೆ ಆಗ್ರಹ: ಮಠಾಧೀಶರು, ಜನಪ್ರತಿನಿಧಿಗಳ ಜತೆ ರೈತ ಮುಖಂಡರ ಪೂರ್ವಭಾವಿ ಸಭೆ - ವಿಜಯಪುರ

ಕಾನೂನಿನಲ್ಲಿ ತಿದ್ದುಪಡಿ ಮಾಡಿ ಸಾರ್ವತ್ರಿಕ ಮತ್ತು ಶಾಶ್ವತ ದಾರಿ ಹಕ್ಕನ್ನು ಸೇರಿಸಿ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರರಿಗೆ ಈ ಮೊದಲಿನಂತೆ ಅಧಿಕಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

vijaypur
ಮಠಾಧೀಶರು, ಜನಪ್ರತಿನಿಧಿಗಳೊಂದಿಗೆ ರೈತರ ಮುಖಂಡರ ಪೂರ್ವಭಾವಿ ಸಭೆ
author img

By

Published : Jul 11, 2021, 10:47 PM IST

ವಿಜಯಪುರ: ಜಿಲ್ಲೆಯ ಸಾಕಷ್ಟು ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಇದೇ ದಾರಿಗಾಗಿ ಗ್ರಾಮೀಣ ಭಾಗದಲ್ಲಿ ಅಣ್ಣ-ತಮ್ಮಂದಿರು, ಗ್ರಾಮಸ್ಥರ ಮಧ್ಯೆ ಜಗಳವಾಗಿದ್ದು, ಹಲವು ಕಡೆ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನು ಚರ್ಚೆ ಮೂಲಕ ಬಗೆಹರಿಸಲು ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ರೈತರ ಪೂರ್ವಭಾವಿ ಸಭೆ ಕರೆಯಲಾಗಿತ್ತು.‌

ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದ್ವೇಷ, ಅಸೂಯೆ ಹುಟ್ಟುವುದು ಜಮೀನುಗಳ ವಿಚಾರವಾಗಿ. ಒಬ್ಬೊಬ್ಬರ ಹೊಲಗಳು ಹೊಂದಿಕೊಂಡಿರುವ ಕಾರಣ ರಸ್ತೆ ಬದಿ ಇರುವ ಹೊಲದ ಮಾಲೀಕರು ಹಾಗೂ ಒಳಗಡೆ ಇರುವ ಹೊಲಗಳ ಮಾಲೀಕರ ಮಧ್ಯೆ ಹೊಲಕ್ಕೆ ಹೋಗುವ ರಸ್ತೆ ಮಾರ್ಗ ವಿಚಾರವಾಗಿ ಮನಸ್ತಾಪ ಸಹಜವಾಗಿದೆ. ಕೆಲವು ಬಾರಿ ವಿಕೋಪಕ್ಕೆ ತಿರುಗಿ ಅನಾಹುತಗಳು ಸಂಭವಿಸಿದೆ. ಈ ಸಮಸ್ಯೆ ಶಾಶ್ವತ ಪರಿಹಾರ ಒದಗಿಸಲು ಈ ಸಭೆ ಕರೆಯಲಾಗಿತ್ತು.

ಜಮೀನು ದಾರಿ ಸರಳೀಕರಣಕ್ಕೆ ಆಗ್ರಹ

2002ಕ್ಕೂ ಮೊದಲು ರೈತರ ಜಮೀನುಗಳಿಗೆ ಹೋಗುವ ರಸ್ತೆಗಳ ಸಮಸ್ಯೆ ಉಂಟಾದರೆ ಅದನ್ನು ತಹಶೀಲ್ದಾರ್ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುತ್ತಿತ್ತು. ಆದರೆ ಈಗ ಆ ಅಧಿಕಾರವನ್ನು ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ತೀರ್ಪು ಬರಲು ವರ್ಷಗಳೇ ಕಳೆದು ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಮೊದಲಿನ ಹಾಗೆ ಮತ್ತೆ ಈ ಅಧಿಕಾರವನ್ನು ತಹಶೀಲ್ದಾರರಿಗೆ ಕೊಡಬೇಕು ಎಂದು ಆಗ್ರಹಿಸಿ ನಿಯೋಗವನ್ನು ಸಿಎಂ ಬಳಿ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಂದಿನ ಸಭೆಗೆ ಜಿಲ್ಲೆಯ ಎಲ್ಲ ಶಾಸಕರನ್ನು, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಶಾಸಕ ದೇವಾನಂದ ಚವ್ಹಾಣ್​​ ಹಾಗೂ ಸೋಮನಗೌಡ ಪಾಟೀಲ ಮಾತ್ರ ಸಭೆಗೆ ಹಾಜರಾಗಿದ್ದರು. ಇದರಿಂದ ಆಕ್ರೋಶಗೊಂಡ ರೈತ ಸಂಘದ ಮುಖಂಡರು ಸಭೆಗೆ ಬಾರದ ಜಿಲ್ಲೆಯ ಜನಪ್ರತಿನಿಧಿಗಳ ಮನೆ ಧರಣಿ ಮಾಡಬೇಕು ಎಂದು ತೀರ್ಮಾನಿಸಿದರು.

ಜನಪ್ರತಿನಿಧಿಗಳು ಮೊದಲು ಸಿಎಂ ಭೇಟಿಗೆ ಒಂದು ದಿನಾಂಕ ನಿಗದಿ ಮಾಡಿ ನಮಗೆ ತಿಳಿಸಬೇಕು. ಅಧಿವೇಶನದ ಮೊದಲೇ ಸಿಎಂ ಅವರನ್ನು ಭೇಟಿಯಾಗಬೇಕು. ಕಾನೂನಿನಲ್ಲಿ ತಿದ್ದುಪಡಿ ಮಾಡಿ ಸಾರ್ವತ್ರಿಕ ಮತ್ತು ಶಾಶ್ವತ ದಾರಿ ಹಕ್ಕನ್ನು ಸೇರಿಸಿ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರಿಗೆ ಈ ಮೊದಲಿನಂತೆ ಅಧಿಕಾರ ನೀಡಬೇಕು ಎಂದು ರೈತರು ಸಭೆಯಲ್ಲಿ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.