ETV Bharat / state

ಶಾಸಕರು ಒಂದು 'ಕೋಮಿ'ಗೆ ಸೀಮಿತವಾಗಬಾರದು: ಬಸನಗೌಡ ಪಾಟೀಲ್ ವಿರುದ್ಧ ಪ್ರಕಾಶ ರಾಠೋಡ್ ಕಿಡಿ - ಬಸನಗೌಡ ಪಾಟೀಲ್ ಯತ್ನಾಳ

ರಾಜ್ಯ ಬಿಜೆಪಿ ಸರ್ಕಾರ ಪತನದ ಅಂಚಿನಲ್ಲಿದೆ. ಶಾಸಕರೇ ಗುಂಪು ಸೇರಿಕೊಂಡು ಸಭೆ ಮಾಡುತ್ತಿದ್ದಾರೆ‌. ಅಲ್ಲದೇ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಇಳಿಸಲು ನೋಡುತ್ತಿದ್ದಾರೆ‌ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್​​ ತಿಳಿಸಿದರು.

Prakash Rathod
ಪ್ರಕಾಶ ರಾಠೋಡ್
author img

By

Published : Jun 4, 2020, 3:38 PM IST

ವಿಜಯಪುರ: ನಗರದ ಶಾಸಕರು ಕೋಮು ಗಲಭೆ ಸೃಷ್ಟಿ ಮಾಡುತ್ತಿದ್ದು, ಒಂದು ಕೋಮಿಗೆ ಸೀಮಿತವಾಗಿ ಕೆಲಸ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್​​ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್​​​​​​ ಯತ್ನಾಳ ಕೊರೊನಾ‌ ಭೀತಿಯಲ್ಲಿ ಜನರ ನೆರವಿಗೆ ಬಂದರೋ ಇಲ್ಲವೋ ಗೊತ್ತಿಲ್ಲ. ನಗರದ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ ಎಂದರು.

ಪ್ರಕಾಶ ರಾಠೋಡ್

ಕೊರೊನಾ‌ ಸಮಯಲ್ಲಿ ಶಾಸಕ ಯತ್ನಾಳ ರಾಜಕೀಯ ಮಾಡಬಾರದು. ಸಂಸದ ರಮೇಶ ಜಿಗಜಿಣಗಿ ಸದ್ಯದಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸುವ ಕುರಿತು ಮಾಹಿತಿ ನೀಡುತ್ತಾರೆ‌. ಮೂರು ಭಾರಿ ಸಂಸದರಾದರೂ ಕೇಂದ್ರದಿಂದ ಸರಿಯಾದ ಯೋಜನೆ ತರುತ್ತಿಲ್ಲ.ಇದಿಷ್ಟೇ ಅಲ್ಲದೇ ಕೊರೊನಾದಿಂದ ತತ್ತರಿಸಿದ ಜನರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಹಾಗೂ ಅನುದಾನ ತರುವ ಕೆಲಸವನ್ನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್​ ಜಾರಕಿಹೊಳಿಗೆ ನಾಚಿಕೆಯಾಗಬೇಕು: ಈಗಾಗಲೇ ರಾಜ್ಯ ಬಿಜೆಪಿ ಸರ್ಕಾರ ಪತನದ ಅಂಚಿನಲ್ಲಿದೆ. ಇನ್ನೊಂದೆಡೆ ಶಾಸಕರೇ ಗುಂಪು ಸೇರಿಕೊಂಡು ಸಭೆ ಮಾಡುತ್ತಿದ್ದಾರೆ‌. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಇಳಿಸಲು ನೋಡುತ್ತಿದ್ದಾರೆ‌ ಎಂದ ಅವರು, ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್‌ನ 5 ಶಾಸಕರನ್ನ ಬಿಜೆಪಿಗೆ ತರುತ್ತೇನೆ ಎಂಬ ಹೇಳಿಕೆ ಕುರಿತು ಮಾತನಾಡಿದ ಪ್ರತಿಕ್ರಿಯಿಸಿ, ಬಿಜೆಪಿ‌ ಸರ್ಕಾರ ಸಂವಿಧಾನಕ್ಕೆ ಅಪಚಾರ ಮಾಡುವ ಕಾರ್ಯ ಮಾಡುತ್ತಿದೆ. ಶಾಸಕರನ್ನ ಹಣ ಕೊಟ್ಟು ಖರೀದಿ ಮಾಡುತ್ತಿದೆ. ರಮೇಶ್​ ಜಾರಕಿಹೊಳಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ತರುವಲ್ಲಿ ವಿಫಲವಾಗಿದೆ. ಪ್ರಧಾನಿ ಯಾವುದೇ ಮುನ್ಸೂಚನೆ ನೀಡದೇ ಲಾಕ್‌ಡೌನ್ ಮಾಡಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳದಿರೋದು ಇಂದು ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಬೇರೆ ರಾಜ್ಯಗಳಿಂದ ಆಗಮಿಸಿದ ವಲಸಿಗರಿಗೆ ಕ್ವಾರಂಟೈನ್ ಮಾಡಿದ ಸ್ಥಳಗಳಲ್ಲಿ ಮೂಲ ಸೌಕರ್ಯಗಳ‌ ಕೊರತೆ ಹೆಚ್ಚಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.