ETV Bharat / state

ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ನೌಕರರ ಪ್ರತಿಭಟನೆ - Electricity Amendment Bill

ಪಟ್ಟಣದ ಹೆಸ್ಕಾಂ ಕಛೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ 2020ರ ವಿದ್ಯುತ್​ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೆಸ್ಕಾಂ ನೌಕರರು, ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ತಿದ್ದುಪಡಿಯಿಂದಾಗಿ ನೌಕರರು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದ್ದಾರೆ.

power supply Employees protest over electricity amendment bill in Muddebihal
ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ನೌಕರರ ಪ್ರತಿಭಟನೆ
author img

By

Published : Jun 1, 2020, 11:41 PM IST

ಮುದ್ದೇಬಿಹಾಳ (ವಿಜಯಪುರ): ವಿದ್ಯುತ್ ತಿದ್ದುಪಡಿ ಮಸೂದೆ-2020ರಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗಿಕರಣಗೊಳಿಸುವ ಕರಾಳ ಉದ್ದೇಶವನ್ನು ಹೊಂದಿದ್ದು, ಯಾವುದೇ ಕಾರಣಕ್ಕೂ ಈ ಕಾಯ್ದೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಪಟ್ಟಣದಲ್ಲಿ ಹೆಸ್ಕಾಂ ಉಪ ವಿಭಾಗದ 4 ಶಾಖೆಗಳ ನೌಕರರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಮಾತನಾಡಿ, ಈ ಕಾಯ್ದೆ ಜಾರಿಯಿಂದಾಗಿ ವಿದ್ಯುತ್ ಬೆಲೆ ಆಯೋಗ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ರೈತರು, ಗ್ರಾಹಕರ ಹಿತವನ್ನು ಈ ಕಾಯ್ದೆ ಬಲಿಕೊಡಲಿದೆ. ಅಲ್ಲದೇ ಹಲವು ವರ್ಷಗಳಿಂದ ಜಿವಿಪಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮರಣ ಶಾಸನವಾಗಿದೆ ಎಂದರು.

ತಂಗಡಗಿ ಶಾಖಾಧಿಕಾರಿ ಎಂ.ಎಸ್.ತೆಗ್ಗಿನಮಠ ಮಾತನಾಡಿ, ಈ ಕಾಯ್ದೆ ಜಾರಿಯಾದರೆ ನೌಕರರು ಬೀದಿಗೆ ಬರುತ್ತೇವೆ. ಸೇವಾ ಭದ್ರತೆಯನ್ನು ಕಸಿದುಕೊಂಡು ಹೆಸ್ಕಾಂನಲ್ಲಿ ಕೆಲಸ ಮಾಡುವವರನ್ನು ಬೀದಿಗೆ ತಳ್ಳಲಿದೆ ಎಂದು ಹೇಳಿದರು.

ಶಾಖಾಧಿಕಾರಿಗಳಾದ ಎಸ್.ಎಸ್.ಪಾಟೀಲ, ಆರ್.ಪಿ.ಹಿರೇಮಠ, ಬಿ.ಎಸ್.ಯಲಗೋಡ, ಎಸ್.ವಾಯ್.ವಾಂಗಿ, ನೌಕರರ ಸಂಘದ ಅಧ್ಯಕ್ಷ ಎಸ್.ಎಂ.ಆರೇಶಂಕರ, ಉಪಾಧ್ಯಕ್ಷ ಎಸ್.ಬಿ.ಗಣಾಚಾರಿ, ಕಾರ್ಯದರ್ಶಿ ಆರ್.ಎಂ.ನಾಯ್ಕಮಕ್ಕಳ, ಬಿ.ಎ.ಮಡಿವಾಳರ, ಎಚ್.ಎ.ನಾಯ್ಕೋಡಿ, ಮತ್ತಿತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.