ETV Bharat / state

ವಿಜಯಪುರದಲ್ಲಿ ಕೊರೊನಾಗೆ ಮತ್ತೊಂದು ಬಲಿ - vijayapura corona cases

ಕಳೆದ ತಿಂಗಳು ಮೃತಪಟ್ಟಿದ್ದ ವೃದ್ಧೆಯ ವರದಿ ಬಂದಿದ್ದು, ವೃದ್ಧೆಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವೃದ್ಧೆಯ ವರದಿ ಸೇರಿ ಜಿಲ್ಲೆಯಲ್ಲಿಂದು 6 ಕೊರೊನಾ ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ.

One more corona infected old age women died in Vijayapura
ವಿಜಯಪುರದಲ್ಲಿ ಕೊರೊನಾಗೆ ಮತ್ತೊಂದು ಬಲಿ: ಕಳೆದ ತಿಂಗಳು ವೃತಪಟ್ಟಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್
author img

By

Published : Jun 6, 2020, 7:23 PM IST

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕಳೆದ ತಿಂಗಳು ವೃತಪಟ್ಟಿದ್ದ ವೃದ್ಧೆಗೆ ಕೊರೊನಾ ಸೋಂಕು ದೃಢವಾಗಿದೆ. ಇಂದು ವೃದ್ಧೆಯ ವರದಿ ಸೇರಿ 6 ಜನರಲ್ಲಿ ಕೊರೊನಾ ದೃಢವಾಗಿದೆ. ಇವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರಿದ್ದಾರೆ. ಆರು ಜನರ ಪೈಕಿ 82 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ತಿಂಗಳು ವೃದ್ಧೆ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ಮೂಲಕ ಸಾವಿನ ಸಂಖ್ಯೆ 6ಕ್ಕೆ ಏರಿದೆ.

ಕಂಟೈನ್ಮೆಂಟ್​​ ಪ್ರದೇಶದ ನಿವಾಸಿಯಾಗಿದ್ದ ವೃದ್ಧೆಯನ್ನು ಅಂದೇ ಸರ್ಕಾರದ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿತ್ತು. ಮೃತಪಟ್ಟಿದ್ದ ವೃದ್ಧೆಗೆ ಕೊರೊನಾ ಇರುವುದು ಇಂದು ದೃಢವಾಗಿದೆ. ಇತರೆ ಸೋಂಕಿತ ಐವರು ಮಹಾರಾಷ್ಟ್ರದಿಂದ ವಾಪಸ್ ಬಂದವರು. ಇವರು ಸಹ ನಗರದ ಕಂಟೈನ್ಮೆಂಟ್ ಏರಿಯಾದವರು. ಈ 6 ಜನ ಸೋಂಕಿತರು ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.