ವಿಜಯಪುರ: ಕೊರೊನಾ ವೈರಸ್ ಉರುಳು ಕೊನೆಗೂ ವಿಜಯಪುರ ಜಿಲ್ಲೆಗೆ ಸುತ್ತಿಕೊಂಡಿದೆ. ಕಳೆದ 12 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪತ್ತೆಯಾಗಿರಲಿಲ್ಲ. ಆದರೆ ಇಂದು 60 ವರ್ಷದ ಮಹಿಳೆಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಹೆಲ್ತ್ ಬುಲೆಟಿನ್ನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಕೊರೊನಾ ವೈರಸ್ ನಿಂದ ಬಳುತ್ತಿರುವ ಕುರಿತು ಮಾಹಿತಿ ನೀಡಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯನ್ನು ಕೊರೊನಾ ವೈರಸ್ ಆಸ್ಪತ್ರೆಯಾಗಿ ಪರಿರ್ವತನೆ ಮಾಡಿದ್ದು, ಪಾಸಿಟಿವ್ ಕಂಡು ಬಂದ ಮಹಿಳೆಯನ್ನು ಇಲ್ಲಿಯೇ ಚಿಕಿತ್ಸೆಗೆ ಒಳಪಡಿಸಲಾಗಿದೆ.
ನಿನ್ನೆಯವರೆಗೆ ಜಿಲ್ಲೆಯಲ್ಲಿ ದಾಖಲಾದ ಪ್ರಕರಣದಲ್ಲಿ 92 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 65 ನೆಗಟಿವ್ ವರದಿಯಾಗಿತ್ತು. ಉಳಿದ 27 ಜನರಲ್ಲಿ ಇಂದು ಮಹಿಳೆಯೊಬ್ಬರಿಗೆ ಪಾಸಿಟಿವ್ ಬಂದಿರುವದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಲಾಗಿದೆ.