ಮುದ್ದೇಬಿಹಾಳ: ಗ್ರಾಪಂ ಚುನಾವಣೆಯಲ್ಲಿ ಹಲವು ವಿಶೇಷತೆಗಳು ಕಂಡು ಬರುತ್ತಿದ್ದು, ಓರ್ವ ಅಭ್ಯರ್ಥಿಯ ಏಜೆಂಟ್ ಹಾಜರಿರದೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಿರುವ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಹಿರೇಮುರಾಳ ಗ್ರಾಪಂ ವಣಕಿಹಾಳ ಗ್ರಾಮದ ಸದಸ್ಯ ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಏಜೆಂಟರನ್ನು ಇಟ್ಟುಕೊಂಡು ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗಿದೆ ಎಂದು ಪರಾಜಿತ ಅಭ್ಯರ್ಥಿ ಕಡೆಯವರು ಆರೋಪಿಸಿದ್ದಾರೆ.
ಓದಿ: LIVE UPDATE ..ಹಳ್ಳಿ ತೀರ್ಪು : ಗೆಲುವಿನ ನಗೆ ಬೀರಿದ ದಂಪತಿ
ಈ ಕುರಿತು ಪ್ರತಿಕ್ರಿಸಿದ ಚುನಾವಣಾಧಿಕಾರಿ ಎಸ್.ಜಿ.ಲೊಟಗೇರಿ, ವಣಕಿಹಾಳ ಗ್ರಾಮದಲ್ಲಿ 3ಬಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಶೀಬಾಯಿ ಬಿರಾದಾರ 110 ಮತಗಳು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ನೀಲಮ್ಮ ಬಸರಕೋಡ ಅವರಿಗೆ 91 ಮತಗಳು ಬಂದಿವೆ.
ಮತ ಎಣಿಕೆ ವೇಳೆ ಏಜೆಂಟರಾಗಲಿ, ಅಭ್ಯರ್ಥಿಗಳಾಗಲಿ ಇರಬೇಕು ಎಂದು ಘೋಷಣೆ ಮಾಡಲಾಗಿದೆ. ಅವರು ಬಾರದ ಕಾರಣ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಹೇಳಿದರು.