ವಿಜಯಪುರ: ಕೊರೊನಾ ಹಿನ್ನೆಲೆ ಮದುವೆಗೆಂದು ಕೂಡಿಟ್ಟ ಹಣದಲ್ಲಿ ಬಡವರಿಗೆ ದಿನಸಿ ಹಂಚಿ ನವ ದಂಪತಿಗಳು ಮಾದರಿಯಾದರು.
ವಿಜಯಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಅನೀಲ-ಲಕ್ಷ್ಮೀ ನವ ದಂಪತಿಗ ಏಪ್ರಿಲ್ 16ರಂದು ಸರಳವಾಗಿ ವಿವಾಹವಾಗಿದ್ದರು. ಮದುವೆಗೆಂದು ಕೂಡಿಟ್ಟಿದ್ದ ಹಣದಲ್ಲಿ ಐವತ್ತು ಸಾವಿರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳನ್ನು ಬಡವರಿಗೆ ವಿತರಿಸಿದರು.

ಗ್ರಾಮದ ಸುಮಾರು 80 ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನವ ದಂಪತಿಗಳು ಪೊರೈಸಿದ್ದಾರೆ. ಅಕ್ಕಿ, ಬೆಲ್ಲ, ಸಕ್ಕರೆ, ಸಾಬೂನು, ಎಣ್ಣೆ, ಬೇಳೆ, ಹಿಟ್ಟು, ಉಪ್ಪು, ಬಿಸ್ಕತ್ ಸೇರಿದಂತೆ ಅಗತ್ಯ ಪದಾರ್ಥಗಳನ್ನು ನೀಡಿದ್ದಾರೆ.