ETV Bharat / state

ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ - Vijayapu

ಪ್ರಧಾನಿ ಮೋದಿ ಹುಟ್ಟಿರುವುದೇ ಅಖಂಡ ಭಾರತ ಮಾಡಲಿಕ್ಕೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು.

asanagouda Patil Yatnal
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
author img

By

Published : Aug 16, 2022, 10:53 AM IST

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣ ಮಾಡಲಿಕ್ಕೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಅಂಗವಿಕಲರಿಗೆ ತ್ರಿ ಚಕ್ರ ವಾಹನ ವಿತರಣೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಹಿಂದೂಗಳು ಹೆಚ್ಚಿರುವುದು ಹಿಂದೂ ರಾಷ್ಟ್ರ. ಮುಸ್ಲಿಂಮರು ಹೆಚ್ಚಿರುವುದು ಪಾಕಿಸ್ತಾನ. ಮಹಾತ್ಮ ಗಾಂಧಿ ಇದೇ ರೀತಿ ದೇಶ ಒಡೆದು ಕೊಟ್ಟಿದ್ದಾರೆ. ಪಾಕಿಸ್ತಾನ ಯಾಕೆ ಒಡೆದು ಕೊಟ್ಟರೋ ಗೊತ್ತಿಲ್ಲ. ಆ ಪುಣ್ಯಾತ್ಮ (ಗಾಂಧೀಜಿ) ಮಾಡಿದ ತಪ್ಪಿನಿಂದ ಕೋಟ್ಯಂತರ ಹಿಂದೂಗಳ ರಕ್ತಪಾತವಾಯಿತು. ಪಾಕಿಸ್ತಾನಕ್ಕೆ 50 ಕೋಟಿ ನೀಡುವಂತೆ ಗಾಂಧೀಜಿ ಉಪವಾಸ ಕುಳಿತರು.

ಇವರು ದೊಡ್ಡವರಾಗಲು ಕೋಟ್ಯಂತರ ಹಿಂದೂಗಳ ಹತ್ಯೆಯಾಯಿತು ಎಂದರು. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ. ಪ್ರಧಾನಿ ಮೋದಿ ಅಂತಹ ನಾಯಕರ ಇರುವಾಗ ಇದು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಬಾಲಿವುಡ್ ಸ್ಟಾರ್​​ಗಳು ಪಾಕಿಸ್ತಾನದ ಏಜೆಂಟರ್: ಬಾಲಿವುಡ್ ಸ್ಟಾರ್​​ಗಳಾದ ಅಮೀರ್​​ ಖಾನ್​, ಶಾರುಖ್​​ ಖಾನ್, ಸಲ್ಮಾನ ಖಾನ್, ಸೈಫ್​​ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ಶಾಸಕ ಯತ್ನಾಳ್​​ ಕಿಡಿಕಾರಿದರು. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಲಾತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್​​, ಹುತ್ತದ ಮೇಲೆ ಹಾಲು ಸುರಿದರೆ ತಪ್ಪು ಎನ್ನುವರು ಮೊಹರಂ ಹಬ್ಬದಲ್ಲಿ ಕುರಿ ಕಡಿಯುವದು ತಪ್ಪು ಅಲ್ವಾ? ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ್​​, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ?, ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್​​ ಚಂದ್ರ ಬೋಸ್ ಎಂದರು. ಗಾಂಧೀಜಿ ಹಠಕ್ಕೆ ಬಿದ್ದ ಕಾರಣ ನೆಹರು ಪ್ರಧಾನಿಯಾದರೇ ಹೊರತು ಯಾರಿಗೂ ಇಷ್ಟವಿರಲಿಲ್ಲ ಎಂದರು.

ದೇಶ ವಿಭಜನೆಗೆ ಡಾ. ಅಂಬೇಡ್ಕರ್ ಬೇಡ ಎಂದಿದ್ದರೂ ಅಲ್ಲಿ ಗಾಂಧೀಜಿ ದೇಶ ವಿಭಜನೆ ಮಾಡಿದರು. ಆಗಲೂ ಅಂಬೇಡ್ಕರ್ ವಿಭಜನೆ ಮಾಡುವದಾದರೆ, ಮುಸ್ಲಿಂ ಅವರು ಪಾಕಿಸ್ತಾನಕ್ಕೆ ಹೋಗಲಿ, ಹಿಂದೂಗಳು ಭಾರತಕ್ಕೆ ಬರಲಿ ಎಂದು ಸಲಹೆ ನೀಡಿದ್ದರೂ ಅದನ್ನು ಗಾಂಧೀಜಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಈ ರೀತಿ ದ್ವೇಷ ಭಾವನೆ ಹುಟ್ಟಿಕೊಂಡಿದೆ ಎಂದರು.

ಇದನ್ನೂ ಓದಿ: ದೇಶ ಧರ್ಮಾಧಾರಿತವಾಗುತ್ತಿದೆ, ಪ್ರಜಾಪ್ರಭುತ್ವ ನಾಶವಾಗುತ್ತಿದೆ.. ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.