ವಿಜಯಪುರ : ಪ್ರತಿ ಕ್ಷೇತ್ರದಲ್ಲಿಯೂ ಪುರುಷರಷ್ಟೇ ಮಹಿಳೆಯರು ಕೂಡ ಸಾಧನೆ ತೋರುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿರುವ ಮಹಿಳೆಯರು ಉನ್ನತ ಶಿಕ್ಷಣ ಪಡೆಯುದರಲ್ಲಿ ಕೂಡ ಹಿಂದೆ ಬಿದ್ದಿಲ್ಲ.
ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ 1200-1250 ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಮಹಿಳೆಯರೇ ಹೆಚ್ಚು ಅನ್ನೋದು ಹೆಮ್ಮೆಯ ವಿಷಯ.
ವಿಜಯಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಮೇಲೆ ಹೆಚ್ಚು ಹೆಚ್ಚು ಮಹಿಳೆಯರು ಉನ್ನತ ಶಿಕ್ಷಣ ಕಲಿಯಲು ಮುಂದೆ ಬರುತ್ತಿದ್ದಾರೆ. ಮದುವೆಯಾದ ಮಹಿಳೆಯರು ಕೂಡ ಸಹ ಉನ್ನತ ಶಿಕ್ಷಣ ಕಲಿಯಲು ಮುಂದಾಗುತ್ತಿದ್ದಾರೆ.
ಇದೇ ಕಾರಣಕ್ಕೆ ಮಹಿಳಾ ವಿವಿಯಲ್ಲಿ ಎಂಎ, ಎಂಎಸ್ಇ, ಪಿಹೆಚ್ಡಿ ಸೇರಿ ವಿವಿಧ ವಿಷಯಗಳ ಮೇಲೆ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಸಹ ವಸತಿ ನಿಲಯದಲ್ಲಿದ್ದು ಉನ್ನತ ಶಿಕ್ಷಣ ಮುಗಿಸಿ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ಸರ್ಕಾರಿ ಜಾಗ ಅತಿಕ್ರಮಣ : ಧಾರವಾಡ ಜಿಲ್ಲೆಯಲ್ಲಿದೆ ಸಾಕಷ್ಟು ಪ್ರಕರಣಗಳು!
ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಮಹಿಳೆಯರ ಬೇಡಿಕೆಗೆ ಅನುಸಾರ ವಿವಿಧ ಕಡೆಗಳಲ್ಲಿ ಹೊಸ ಕ್ಯಾಂಪಸ್ ತೆರೆಯುತ್ತಿದೆ. ಈಗಾಗಲೇ ಮೂರು ಕಡೆಗಳಲ್ಲಿ ಹೊಸ ಕ್ಯಾಂಪಸ್ ಆರಂಭವಾಗಿದೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಅನುದಾನ ನೀಡಿದರೆ ಮತ್ತಷ್ಟು ಕ್ಯಾಂಪಸ್ಗಳು ಆರಂಭವಾಗಲಿವೆ. ಈ ಮೂಲಕ ಮಹಿಳೆಯರು ಉನ್ನತ ಶಿಕ್ಷಣ ಪಡೆಯಲು ಹೆಚ್ಚು ಸಹಕಾರಿಯಾಗಲಿದೆ.