ETV Bharat / state

ವಿಜಯಪುರ ಜಿಲ್ಲೆಯಲ್ಲಿ 50 ಮಕ್ಕಳಿಗೆ ಕೊರೊನಾ ದೃಢ: ಚಿಣ್ಣರ ಆರೈಕೆಗೆ ಸಕಲ ಸಿದ್ಧ ಎಂದ ಉಸ್ತುವಾರಿ ಸಚಿವೆ

author img

By

Published : Jan 13, 2022, 7:30 AM IST

Updated : Jan 13, 2022, 9:02 AM IST

ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ 50 ಮಕ್ಕಳಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತ ಮಕ್ಕಳ ಆರೈಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದ ಉಸ್ತುವಾರಿ ಸಚಿವೆ ಹೇಳಿದ್ದಾರೆ.

children tested positive for corona, children tested positive for corona in vijayapura, Vijayapura corona news, ಮಕ್ಕಳಿಗೆ ಕೊರೊನಾ ಸೋಂಕು ದೃಢ, ವಿಜಯಪುರದಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ದೃಢ, ವಿಜಯಪುರ ಕೊರೊನಾ ಸುದ್ದಿ,
ವಿಜಯಪುರ ಜಿಲ್ಲೆಯಲ್ಲಿ 50 ಮಕ್ಕಳಿಗೆ ಕೊರೊನಾ ದೃಢ ಎಂದ ಸಚಿವೆ

ವಿಜಯಪುರ: ಜಿಲ್ಲೆಯವಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ 18ವರ್ಷದ ಒಳಗಿನ 50 ಮಕ್ಕಳಿಗೆ ಕೋವಿಡ್ ಸೋಂಕು ಹರಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಕೋವಿಡ್ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು, ಒಂದು ವರ್ಷದಿಂದ 18 ವರ್ಷದ ಒಳಗಿನ 50 ಮಕ್ಕಳಲ್ಲಿ ಕೊವಿಡ್ ಸೋಂಕು ಧೃಡಪಟ್ಟಿದೆ.

ಇವರು ಸದ್ಯ ಹೋಂ ಐಸೋಲೇಷನ್​ನಲ್ಲಿ ಆರೈಕೆ ಮಾಡಲಾಗುತ್ತಿದ್ದು, ಅವರಲ್ಲಿ ಯಾರಿಗೂ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇಲ್ಲ ಎಂದರು.

ಸದ್ಯ 18ವರ್ಷ ದೊಳಗಿನ ಮಕ್ಕಳಿಗೆ ಈಗಾಗಲೇ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಕೋವಿಡ್ ಪ್ರಭಾವ ಬೀರುವ ಕುರಿತು ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಓದಿ: ಪುಣೆಯಲ್ಲಿ ಡ್ಯಾನ್ಸ್​ ಮೂಲಕ ಬಾಳೆಹಣ್ಣು ಮಾರಾಟ ಮಾಡುವ ವ್ಯಾಪಾರಿ!

ಕೋವಿಡ್‌ ಸೋಂಕು ನಿರ್ವಹಣೆಯ ಕುರಿತಂತೆ ಜಿಲ್ಲಾಡಳಿತ ಇದುವರೆಗೂ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಗಡಿ ಪ್ರದೇಶದಿಂದ ಬರುವವರ ತಪಾಸಣೆಗೆ ಕೈಗೊಂಡಂತಹ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವೆ. ಅಲ್ಲದೇ, ಮೂರನೇ ಅಲೆ ಪ್ರಬಲವಾದರೆ ಅದರ ಸುಲಲಿತ ನಿರ್ವಹಣೆಗೆ ಮುಂಜಾಗ್ರತವಾಗಿ ತಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.

ರಾಜ್ಯದಲ್ಲಿ ದಿನೇ ದಿನೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಾರಿಯ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಜ್ಜಾಗಬೇಕು.

ಅಲ್ಲದೇ, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಂಭವ ಇರುವುದರಿಂದ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿರುವ ಹಳೇ ಡಯಾಲಿಸಿಸ್‌ ವಾರ್ಡ್​ಗಳನ್ನು ಬದಲಾಯಿಸಿ 10 ವೆಂಟಿಲೇಟರ್​ಗಳುಳ್ಳ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ನಿಗಾ ಘಟಕ ನಿರ್ಮಾಣದ ಸಿವಿಲ್‌ ಹಾಗೂ ಎಲೆಕ್ಟ್ರಿಕಲ್‌ ಕಾಮಗಾರಿ ಪೂರ್ಣಗೊಳಿಸಲಾಗಿದೆ. 14 ಹಾಸಿಗೆಯ ಎಚ್​​ಡಿಯು ಸಾಮಾನ್ಯ ತೀವ್ರ ನಿಗಾ ಘಟಕ ಸ್ಥಾಪಿಸಲಾಗಿದೆ ಎಂದರು.

ಓದಿ: ಜಮ್ಮು-ಕಾಶ್ಮೀರದ ಕುಲ್ಗಾಮ್‌ ಗುಂಡಿನ ದಾಳಿಯಲ್ಲಿ ಉಗ್ರನ ಹತ್ಯೆ; ಓರ್ವ ಪೊಲೀಸ್ ಹುತಾತ್ಮ

ಕೋವಿಡ್‌ ಪ್ರಕರಣಗಳು: ಜನವರಿ 1 ರಿಂದ ಇದುವರೆಗೂ 15,842 ಸ್ಯಾಂಪಲ್​ಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 180 ಪ್ರಕರಣಗಳು ಮಾತ್ರ ಕೊರೊನಾ ಪಾಸಿಟಿವ್‌ ಬಂದಿದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್‌ ಶೇ1.14 ರಷ್ಟು ಇದೆ. ಜಿಲ್ಲೆಯಲ್ಲಿ 160 ಪ್ರಕರಣಗಳು ಜಾಲ್ತಿಯಲ್ಲಿದ್ದು, 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಹೋಂ ಐಸೋಲೇಷನ್​ನಲ್ಲಿ ಇಡಲಾಗಿದೆ ಎಂದರು.

ಆಮ್ಲಜನಕ ಸರಬರಾಜು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಮ್ಯಾನಿಫೋಲ್ಡ್‌ನಿಂದ ತುರ್ತು ನಿಗಾ ಘಟಕ 1, 2 ಮತ್ತು 3 ಘಟಕಗಳಿಗೆ ಆಮ್ಲಜನಕ ಸರಾಗವಾಗಿ ಪೂರೈಕೆ ಕುರಿತು ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಜಿಲ್ಲಾಡಳಿತದ ಬಳಿ 642 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ ಗಳಿವೆ. ಇವುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

Last Updated : Jan 13, 2022, 9:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.