ವಿಜಯಪುರ : ಮಹಾನ್ ನಾಯಕರ ಪುತ್ಥಳಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ವಿಜಯಪುರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಗೃಹಸಚಿವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿದರೆ ಇಂಥ ಕ್ರಿಮಿಗಳು ಮತ್ತೊಮ್ಮೆ ಬಾಲ ಬಿಚ್ಚುವುದಿಲ್ಲ ಎಂದಿದ್ದಾರೆ.
ದೇಶದ ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಅವಮಾನ ಮಾಡಲಾಗುತ್ತಿದೆ. ಈ ಹಿಂದೆ ಶಿವಾಜಿ ಮಹಾರಾಜರು, ಅಂಬೇಡ್ಕರ್, ಈಗ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಗುಂಪಿದೆ.
ಯಾವುದೇ ಮಹಾನ್ ನಾಯಕರ ಪುತ್ಥಳಿಗಳಿಗೆ ಅವಮಾನ ಮಾಡಬಾರದು. ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸೋಮವಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು ಸೇರಿ ಚರ್ಚೆ ನಡೆಸುತ್ತೇವೆ. ಎಂಇಎಸ್ ಹಾಗೂ ಶಿವಸೇನೆ ಮೇಲೆ ಕ್ರಮಕೈಗೊಳ್ಳಬೇಕು. ಶಿವಸೇನೆ ಒಂದು ಭಾಷೆಗೆ ಸೀಮಿತವಾಗಿರುವುದು ದುರ್ದೈವದ ಸಂಗತಿ ಎಂದರು.
ಇದನ್ನೂ ಓದಿ: ಗಲಭೆ ಉದ್ವಿಗ್ನ.. ಮಹಾರಾಷ್ಟ್ರ-ಬೆಳಗಾವಿ ಗಡಿ ಬಂದ್!