ವಿಜಯಪುರ: ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಸಚಿವ ಎಂ. ಬಿ ಪಾಟೀಲ ನೀಡಿದ ಎಚ್ಚರಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎಂದು ತಿರುಗೇಟು ನೀಡಿದ್ದಾರೆ.
ನೂತನ ಸಚಿವರಾಗಿ ಮೊನ್ನೆ ಎಂ. ಬಿ. ಪಾಟೀಲ ಅವರು ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗೋಷ್ಟಿಯಲ್ಲಿ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮಾತನಾಡಿ, ಅವರು ಇದೇ ರೀತಿ ವರ್ತನೆ ತೋರಿದರೆ ಜೈಲಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆ ಯತ್ನಾಳ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಯಾರೇ ಮಾತಾಡಿದರೂ ಜೈಲಿಗೆ ಹಾಕ್ತೀವಿ ಅಂತ ಹೇಳೋಕೆ ಇದು ತಾಲಿಬಾನ್ ಆಡಳಿತ ಅಲ್ಲ. ಕರ್ನಾಟಕ ಎನ್ನುವುದನ್ನು ಸಚಿವ ಎಂ. ಬಿ. ಪಾಟೀಲರು ಮರೆಯಬಾರದು’ ಎಂದು ಹೇಳಿದ್ದಾರೆ.
-
ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು.
— Basanagouda R Patil (Yatnal) (@BasanagoudaBJP) June 6, 2023 " class="align-text-top noRightClick twitterSection" data="
Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ?
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ…
">ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು.
— Basanagouda R Patil (Yatnal) (@BasanagoudaBJP) June 6, 2023
Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ?
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ…ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು @MBPatil ಅವರು ಮರೆಯಬಾರದು.
— Basanagouda R Patil (Yatnal) (@BasanagoudaBJP) June 6, 2023
Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ?
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ…
‘ಜೈಲಿಗೆ ಕಳಿಸ್ತೀವಿ’ ಎಂದು ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರಾ? ಎಂದು ಪ್ರಶ್ನೆ ಮಾಡಿರುವ ಯತ್ನಾಳ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂತ್ರಿಗಳು ಅಸಹಿಷ್ಣುಗಳು ಆಗಬಾರದು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ನಾಲ್ಕು ವರ್ಷ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು?: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ, ಯತ್ನಾಳ್ ಅವರೇ, ಕಳೆದ ನಾಲ್ಕು ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್ ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಎಂ.ಬಿ. ಪಾಟೀಲರು ತೀಕ್ಷ್ಣವಾಗಿ ತಿರುಗೇಟು ನೀಡಿ ಮರು ಟ್ವೀಟ್ ಮಾಡಿದ್ದಾರೆ.
-
ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
— M B Patil (@MBPatil) June 6, 2023 " class="align-text-top noRightClick twitterSection" data="
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು… https://t.co/pWSm3H9yuK
">ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
— M B Patil (@MBPatil) June 6, 2023
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು… https://t.co/pWSm3H9yuKತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
— M B Patil (@MBPatil) June 6, 2023
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು… https://t.co/pWSm3H9yuK
ಇದಕ್ಕೆ ಮರು ಟ್ವೀಟ್ ಮಾಡಿರುವ ಶಾಸಕ ಯತ್ನಾಳ್, ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ ಎಂ. ಬಿ ಪಾಟೀಲರೇ. ನಿಮ್ಮ ನಾಯಕರನ್ನು ಮತ್ತು ಬಾಂಧವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ! ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು, ನನ್ನ ಮಾತಿಗೆ ಈಗಲೂ ನಾನು ಬದ್ಧ ಎಂದು ಹೇಳಿದ್ದಾರೆ.
-
ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ @MBPatil ರೇ,
— Basanagouda R Patil (Yatnal) (@BasanagoudaBJP) June 6, 2023 " class="align-text-top noRightClick twitterSection" data="
ನಿಮ್ಮ ನಾಯಕರನ್ನು ಮತ್ತು ಭಾಂದವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ!
ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು… https://t.co/IjTRzHbSby
">ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ @MBPatil ರೇ,
— Basanagouda R Patil (Yatnal) (@BasanagoudaBJP) June 6, 2023
ನಿಮ್ಮ ನಾಯಕರನ್ನು ಮತ್ತು ಭಾಂದವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ!
ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು… https://t.co/IjTRzHbSbyಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ @MBPatil ರೇ,
— Basanagouda R Patil (Yatnal) (@BasanagoudaBJP) June 6, 2023
ನಿಮ್ಮ ನಾಯಕರನ್ನು ಮತ್ತು ಭಾಂದವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ!
ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು… https://t.co/IjTRzHbSby
ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ, ಆಡಳಿತಕ್ಕೆ ಬಂದ ಒಂದೇ ವಾರದಲ್ಲಿ ಕಾಂಗ್ರೆಸ್ ಸರ್ಕಾರ ಹಿಟ್ಲರ್ ನೀತಿಯನ್ನು ಅನುರಿಸುತ್ತಿದೆ. ನಮ್ಮ ಕಾರ್ಯಕ್ರಮವನ್ನು ತಡೆಯುವ ಪ್ರಯತ್ನ ನಡೆಸಿತ್ತು ಎಂದು ಹೇಳಿದ್ದರು.
ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಎಂ ಬಿ ಪಾಟೀಲ್ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನೀವು ಮಾಡಿರುವ ಅನಾಹುತಗಳನ್ನು ನಾವು ಸರಿ ಪಡಿಸುತ್ತಿದ್ದೇವೆ. ನಾಟಕ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಬಿಜೆಪಿಯಿಂದ ವಿರೋಧ.. ಸಚಿವ ಎಂ ಬಿ ಪಾಟೀಲ್ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಉಚಿತ ವಿದ್ಯುತ್ ಯೋಜನೆ : ಸಾಧಕ ಬಾಧಕಗಳ ಕುರಿತು ಬೆಸ್ಕಾಂ ಅಧಿಕಾರಿಗಳ ಜೊತೆ ಇಂಧನ ಸಚಿವ ಜಾರ್ಜ್ ಸಭೆ