ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರೇ ಕಾಯುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮೊನ್ನೆ ಜೋಡೆತ್ತುಗಳಾದ ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಸಭೆ ನಡೆಸಿ ಸಿದ್ರಾಮಯ್ಯನ ಮೂಲೆಗುಂಪು ಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಇವರ ಕುತಂತ್ರ ಸಿದ್ರಾಮಯ್ಯ ಅವರ ಗಮನಕ್ಕೆ ಬಂದಿದೆ. ಹಾಗಾಗಿ ಜೋಡೆತ್ತುಗಳು ಅದರಲ್ಲಿ ಸಂಪೂರ್ಣ ವಿಫಲರಾಗುತ್ತಾರೆ ಎಂದರು. ದಿನೇಶ್ ಗುಂಡೂರಾವ್ ಅವರಲ್ಲಿ ಭಯವಿದೆ, ಅವರ ಕೈಯಲ್ಲಿ ಶಾಸಕರುಗಳು ಉಳಿದಿಲ್ಲ ಕುಮಾರಸ್ವಾಮಿ ಅವರ ಕೈಯಲ್ಲೂ ಸಹ ಅವರ ಶಾಸಕರು ಉಳಿದಿಲ್ಲ ಎಂದರು. ಬೈ ಎಲೆಕ್ಷನ್ನಲ್ಲಿ ಗೆದ್ದು ಮತ್ತೆ ಅಧಿಕಾರ ನಡೆಸಬೇಕು ಎಂದು ಕನಸು ಕಂಡಿದ್ದರು ಅದು ಸಾದ್ಯವಾಗಲ್ಲ ಎಂದರು.
ಡಿಸೆಂಬರ್ 9ರ ಬಳಿಕ ಸಂಪೂರ್ಣ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಚಿತ್ರಣವಿದೆ. ಮುಂದಿನ ಮೂರೂವರೆ ವರ್ಷ ಬಿ. ಎಸ್. ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.