ETV Bharat / state

ಸಚಿವ ಸಂಪುಟ ಪುನರ್‌ರಚನೆ ಇಲ್ಲ, ವಿಸ್ತರಣೆ; ಕಾದು ನೋಡಿ: ಯತ್ನಾಳ

author img

By

Published : Dec 25, 2020, 2:36 PM IST

Updated : Dec 25, 2020, 2:41 PM IST

ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾರ್ಮಿಕವಾಗಿ ನುಡಿದಿದ್ದಾರೆ.

MLA Basanagouda Patil Yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಬಿಜೆಪಿ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 16ಕ್ಕೆ ವಿಜಯಪುರಕ್ಕೂ ಬರುತ್ತಿದ್ದಾರೆ. ಅಷ್ಟರೊಳಗಾಗಿ ಸಚಿವ ಸಂಪುಟ ವಿಸ್ತರಣೆಯಾಗುತ್ತೋ, ಬದಲಾವಣೆಯಾಗುತ್ತೋ ಗೊತ್ತಿಲ್ಲ. ಮತ್ತೇನಾದರೂ ಆಗಬಹುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ಸಂಪುಟ ಪುನರ್‌ರಚನೆ ಇಲ್ಲ, ವಿಸ್ತರಣೆ; ಕಾದು ನೋಡಿ: ಯತ್ನಾಳ

ವಿಜಯಪುರ ನಗರದಲ್ಲಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ತಿ ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು.

ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ ಎನ್ನುವ ಮೂಲಕ ತಮಗೆ ಸಚಿವ ಆಗುವ ಅವಕಾಶವಿದೆ ಎಂದು ಪರೋಕ್ಷವಾಗಿ ನುಡಿದರು. ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಮುಂಚೆಯೇ ಹಲವು ವಿದ್ಯಮಾನಗಳು ನಡೆಯಬಹುದು ಎಂದು ಮತ್ತೆ ಸಿಎಂ ಬಿಎಸ್​ವೈ ಕುರ್ಚಿ ಅಲುಗಾಡುತ್ತಿರುವ ಕುರಿತು ಮಾಹಿತಿ ನೀಡಿದರು.

ನೀವು ಮಾಧ್ಯಮದವರು ಯಾರನ್ನು ಯಾವಾಗ ಹೊಗಳುತ್ತೀರೋ, ತೆಗಳುತ್ತೀರೋ ಗೊತ್ತಾಗುವುದಿಲ್ಲ. ಸಂಪುಟ ಸರ್ಕಸ್ ನೀವು ಹೇಳಿದಂತೆ ನಡೆಯುತ್ತಿದೆ. ನಾನು‌ ಸಚಿವನಾಗುತ್ತೇನೆ ಎಂದು ಹಾಕಬೇಡಿ, ಸಿಎಂ ಕೈಗೊಳ್ಳುವ ನಿರ್ಧಾರ ಅಂತಿಮವಾಗಿರುತ್ತದೆ. ಒಟ್ಟಾರೆ ಸಂಕ್ರಮಣ ವಿಜಯಪುರ ಹಾಗೂ ಉತ್ತರ ಕರ್ನಾಟಕಕ್ಕೆ ಒಳ್ಳೆಯ ದಾಗಲಿದೆ ಎನ್ನುವುದನ್ನು ಮಾತ್ರ ಹೇಳಬಲ್ಲೆ ಎಂದರು.

Last Updated : Dec 25, 2020, 2:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.