ವಿಜಯಪುರ : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಯಾರು ಇದ್ದಾರೆ ಎಲ್ಲವೂ ಗೊತ್ತಿದೆ. ದಾಖಲೆ ಸಮೇತ ನಮಗೆ ಮಾಹಿತಿ ಇದೆ. ಅವರಿಗೆಲ್ಲ ತಕ್ಕ ಶಾಸ್ತಿ ಆಗಲಿದೆ ಎಂದಿದ್ದಾರೆ.
ಈ ಫೋಟೋ ವೈರಲ್ ಪ್ರಕರಣದಲ್ಲಿ ಎಲ್ಲ ಪಕ್ಷದವರಿದ್ದಾರೆ. ಸಿಡಿ ಮಾಡುವಂತದ್ದು ಬಿಜೆಪಿಯ ಒಬ್ಬರದ್ದು ಹಾಗೂ ಕಾಂಗ್ರೆಸ್‌ನವರ ಒಬ್ಬರದು ಫ್ಯಾಕ್ಟರಿ ಇದೆ ಎಂದು ನಾನು ಹಿಂದೆಯೇ ಹೇಳಿದ್ದೇನೆ. ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ನನ್ನ ಸಿಡಿ ಇದ್ದರೆ ಬಿಡುಗಡೆ ಆಗಬೇಕಲ್ಲ. ಯಾರಾದರೂ ವಿಡಿಯೋ ಕಾಲ್ ಮಾಡಿದಾಗ ಕೆಲವೊಮ್ಮೆ ನಾನು ರಿಸೀವ್ ಮಾಡುತ್ತೇನೆ. ಕಾರ್ಯಕರ್ತರು ಕೆಲವೊಮ್ಮೆ ಒತ್ತಾಯ ಮಾಡಿದಾಗ ನಾನು ವಿಡಿಯೋ ಕಾಲ್ ರಿಸೀವ್ ಮಾಡುತ್ತೇನೆ ಎಂದರು.
ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಈ ಕುರಿತು ತನಿಖೆ ಮಾಡುತ್ತಾರೆ. ಯಾರು ಬೆಳೆಯುತ್ತಿದ್ದಾರೆ, ಯಾರು ನೇರವಾಗಿ ಮಾತನಾಡುತ್ತಾರೆ, ಅಂತವರನ್ನು ತುಳಿಯುವ ಪ್ರಯತ್ನ ಇದಾಗಿದೆ. ಇಂತಹ ನೂರು ಆರೋಪ ಬಂದರೂ ಎದುರಿಸುವ ತಾಕತ್ತು ನನಗಿದೆ. ಕಳ್ಳರು ಇನ್ನೊಂದು ಸ್ವಲ್ಪ ದಿನದಲ್ಲಿ ಸಿಗುತ್ತಾರೆ, ಜನರ ಮುಂದೆ ಬೆತ್ತಲಾಗುತ್ತಾರೆ.