ವಿಜಯಪುರ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ.
ಅರುಣ್ ಭಜಂತ್ರಿ (12) ಮೃತ ಬಾಲಕ. ಕಳೆದ ಡಿ.21 ರಂದು ಬಾಲಕ ಅರುಣ್ ಮನೆಯಿಂದ ಕಾಣೆಯಾಗಿದ್ದನು. ಈ ಸಂಬಂಧ ಡಿ.23 ರಂದು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪೋಷಕರು ಪ್ರಕರಣ ದಾಖಲಿಸಿದ್ದರು. ಇಂದು ಯರನಾಳ ಗ್ರಾಮದಲ್ಲಿರುವ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಓದಿ: ಗ್ರಾಪಂ ಅಭ್ಯರ್ಥಿ ಸೂಚಕರ ಮೇಲೆ ಹಲ್ಲೆ ಆರೋಪ: ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ