ವಿಜಯಪುರ: ದೇವೇಗೌಡರ ಗರಡಿಯಲ್ಲಿಯೇ ನಾನೂ ಸಹ ಬೆಳೆದವನು. ಕುಮಾರಸ್ವಾಮಿ ಅವರ ತಂದೆಯ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಂದು ಸಂಜೆಯವರೆಗೂ ಅವರಿಗೆ ಸಮಯವಿದೆ, ಅವರು ಏನು ಬೇಕಾದರೂ ಹೇಳಲಿ, ನಾವು ಕೇಳುತ್ತೇವೆ ಎಂದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿಂದಗಿಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ತೇವೆ. ಸಿಂದಗಿಗಿಂತಲೂ ಅಧಿಕ ಮತದಲ್ಲಿ ಹಾನಗಲ್ನಲ್ಲಿ ಜಯ ದಾಖಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಲಮೇಲದಲ್ಲಿ 16 ಬೂತ್ಗಳಿವೆ ಇಲ್ಲಿ 14 ಸಾವಿರ ಮತದಾರರಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ಸಿಂದಗಿಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಿದ್ದೇವೆ ಎಂದು ಭರವಸೆ ಕೊಟ್ಟರು.
ಸಿಎಂ ಬೊಮ್ಮಾಯಿ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಟ್ಟಿದಾರೆ. ವೃದ್ಧರಿಗೆ ಮಾಸಾಶನ ಹೆಚ್ಚು ಮಾಡಿದ್ದಾರೆ. ಬಿಜೆಪಿ ಗೆಲ್ಲಲು ಇವಿಷ್ಟು ಸಾಕು. ಚುನಾವಣೆ ಬಳಿಕ ಸಚಿವರು ಇಲ್ಲಿಗೆ ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಇದನ್ನೂ ಓದಿ: 341ನೇ ವಿಧಿಯಲ್ಲಿರುವ ಗೊಂದಲಗಳನ್ನು ಬಗೆಹರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ: ಎ.ನಾರಾಯಣಸ್ವಾಮಿ