ವಿಜಯಪುರ: ಸದಾ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಬುಸುಗುಡುತ್ತಿರುವ ವಿಜಯಪುರ ನಗರ ಶಾಸಕ ಯತ್ನಾಳ್ ನಿವಾಸಕ್ಕೆ ಸಿಎಂ ಆಪ್ತ ವಸತಿ ಸಚಿವ ವಿ. ಸೋಮಣ್ಣ ಧೀಡಿರ್ ಭೇಟಿ ನೀಡಿ, ಉಭಯ ಕುಶಲೂಪರಿ ಚರ್ಚೆ ನಡೆಸಿದ್ದಾರೆ. ನಂತರ ಭೋಜನ ಸವಿದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಾಳೆ ವಿಜಯಪುರ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂತ್ರಿ ಆವಾಸ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲು ಇಂದು ರಾತ್ರಿ ವಿಜಯಪುರಕ್ಕೆ ಆಗಮಿಸಿದ್ದ, ಸಚಿವ ಸೋಮಣ್ಣ ಶಾಸಕ ಬಸನಗೌಡ ಪಾಟೀಲ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಯತ್ನಾಳ್ ಜೆಡಿಎಸ್ ಸೇರ್ಪಡೆಯಾದಾಗಿದ್ದಾಗ ಸೋಮಣ್ಣ ಹಾಗೂ ಯತ್ನಾಳ್ ನಡುವೆ ಮಾತಿನ ಸಮರ ನಡೆದಿತ್ತು.
ಇಬ್ಬರು ಏಕವಚನದಲ್ಲೆ ಬೈದಾಡಿಕೊಂಡಿದ್ದರು. ಈಗ ಇಬ್ಬರು ತಮ್ಮ ಮುನಿಸು ಬಿಟ್ಟು ಪರಸ್ಪರ ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ. ಯತ್ನಾಳ್ ನಿವಾಸದಲ್ಲಿ ಪ್ರೀತಿಯ ಭೋಜನ ಸವಿದಿದ್ದಾರೆ.
ನಾಳೆ ಕಾರ್ಯಕ್ರಮದಲ್ಲಿ ಯೇ ಭೇಟಿಯ ನಿರೀಕ್ಷೆ ಇತ್ತು. ಆದರೆ ರಾತ್ರಿಯೇ ವಿಜಯಪುಕ್ಕೆ ಆಗಮಿಸಿದ ಸೋಮಣ್ಣ. ನೇರವಾಗಿ ಯತ್ನಾಳ್ ನಿವಾಸಕ್ಕೆ ತೆರಳಿ ಭೋಜನ ಸ್ವೀಕರಿಸಿದ್ದಾರೆ. ಕೆಲ ರಾಜಕೀಯ ವಿಚಾರ ಚರ್ಚೆ ನಡೆದಿರುವ ಸಾಧ್ಯತೆ ಇದೆ ಎಂದು ಯತ್ನಾಳ್ ಬೆಂಬಲಿಗ ಮೂಲಗಳು ತಿಳಿಸಿವೆ.