ETV Bharat / state

ಮುಳವಾಡ ಏತನೀರಾವರಿ ಯೋಜನೆ ವೀಕ್ಷಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ - undefined

ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಶಾಖಾ ಕಾಲುವೆಯ ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ವೀಕ್ಷಿಸಿದರು. ಜೊತೆಗೆ ಕಡಿಮೆ ಅವಧಿಯಲ್ಲಿ ಯೋಜನೆ ಮುಕ್ತಾಯ ಹಂತಕ್ಕೆ ತಲುಪಿರುವುದಕ್ಕೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು..

ಗೃಹ ಸಚಿವ ಎಂ.ಬಿ.ಪಾಟೀಲ್
author img

By

Published : Jun 9, 2019, 8:17 PM IST

ವಿಜಯಪುರ: ತಾಂತ್ರಿಕ ದೃಷ್ಠಿಯಿಂದ ಖ್ಯಾತವಾಗಿರುವ, ಮುಳವಾಡ ಏತನೀರಾವರಿ ಯೋಜನೆಯ ತಿಡಗುಂದಿ ಶಾಖಾ ಕಾಲುವೆಗೆ ನಿರ್ಮಿಸಿರುವ ವಯಾಡಕ್ಟ್ ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ವೀಕ್ಷಿಸಿದರು.

ವಯಾಡಕ್ಟ್ (ಜಲಸೇತುವೆ) 0.0ಕಿ.ಮೀ ನಿಂದ ಹಿಡಿದು ಬುರಾಣಪುರ, ಐನಾಪುರ, ಅಲಿಯಾಬಾದ, ಹಂಚಿನಾಳ, ಭೂತನಾಳ ಗ್ರಾಮಗಳ ವ್ಯಾಪ್ತಿಯ ಕೊನೆಯ ತುದಿ 17.43ಕಿ.ಮೀ ವರೆಗೆ ಸೇತುವೆ ಉದ್ದಕ್ಕೂ ಪರಿವೀಕ್ಷಣೆ ನಡೆಸಿದರು. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿ, 18 ತಿಂಗಳ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಮುಗಿಸುವ ಹಂತಕ್ಕೆ ತಲುಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಪ್ಟೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಸೂಚಿದರು.

ಏತನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪಾಟೀಲ್, ಪೂರ್ಣ ಕಾಮಗಾರಿಯನ್ನು 100 ದಿನದೊಳಗೆ ಪೂರ್ಣಗೊಳಿಸಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರನ್ನು ಆಹ್ವಾನಿಸಿ ಜಲಸೇತುವೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

Intro:ವಿಜಯಪುರ Body:ವಿಜಯಪುರ: ದೇಶದ ಅತೀ ದೊಡ್ಡ ಜಲಸೇತುವೆ ಎಂದೇ ತಾಂತ್ರಿಕ ದೃಷ್ಠಿಯಿಂದ ಖ್ಯಾತವಾಗಿರುವ ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಶಾಖಾ ಕಾಲುವೆಗೆ ನಿರ್ಮಿಸಿರುವ ವಯಾಡಕ್ಟ್ (2.7ಕಿ.ಮೀ-17.43ಕಿ.ಮೀ) ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ ವೀಕ್ಷಿಸಿದರು.
ವಯಾಡಕ್ಟ್ (ಜಲಸೇತುವೆ) 0.0ಕಿ.ಮೀ ಬುರಾಣಪುರದಿಂದ ಐನಾಪುರ, ಅಲಿಯಾಬಾದ, ಹಂಚಿನಾಳ, ಭೂತನಾಳ ಗ್ರಾಮಗಳ ಸರ್ವೇ ನಂ. ವ್ಯಾಪ್ತಿಯಲ್ಲಿ ಕೊನೆಯ ತುದಿ 17.43ಕಿ.ಮೀ ವರೆಗೆ ಸೇತುವೆ ಉದ್ದಕ್ಕೂ ಪರಿವೀಕ್ಷಣೆ ನಡೆಸಿದರು.
ಖುದ್ದು ಕ್ರೇನ್ ಮೂಲಕ ಮೇಲ್ ಸೇತುವೆ ಏರಿ ಕಾಮಗಾರಿ ವೀಕ್ಷಿಸಿ ಗುತ್ತಿಗೆದಾರರು, ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿ 18 ತಿಂಗಳ ಅವಧಿ ಕಾಮಗಾರಿಯನ್ನು ಕಡಿಮೆ ಅವಧಿ ಮುಗಿಸುವ ಹಂತ ತಲುಪಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸೆಪ್ಟೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಸೂಚಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ ಪೂರ್ಣ ಕಾಮಗಾರಿಯನ್ನು 100ದಿನದೊಳಗೆ ಪೂರ್ಣಗೊಳಿಸಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ ಅವರನ್ನು ಆಹ್ವಾನಿಸಿ ಜಲಸೇತುವೆ ಲೋಕಾರ್ಪಣೆ ಮಾಡಿಸಲಾಗುವದು ಎಂದರು
ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳು ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದರು.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.