ETV Bharat / state

ಚುನಾವಣೆಗೂ ಮುನ್ನವೇ ಕೋವಿಡ್​ ಅವ್ಯವಹಾರದ ತನಿಖೆ: ಲಕ್ಷ್ಮೀ ಹೆಬ್ಬಾಳ್ಕರ್‌

author img

By ETV Bharat Karnataka Team

Published : Dec 27, 2023, 11:02 PM IST

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಇಂದು ವಿಜಯಪುರ ಪ್ರವಾಸ ಕೈಗೊಂಡಿದ್ದು ವೀರಶೈವ ಮಹಾಸಭಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೋವಿಡ್ ಹಗರಣದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ವಿಜಯಪುರ: ಲೋಕಸಭೆ ಚುನಾವಣೆಗೂ ಮುನ್ನವೇ ಕೋವಿಡ್​ ಅವ್ಯವಹಾರದ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ. ಇಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೋವಿಡ್​ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ನಾವು ಮುಂಚೆಯಿಂದಲೂ ಕೋವಿಡ್​ ಸಂದರ್ಭದಲ್ಲಿ​ ಅವ್ಯವಹಾರ ಆಗಿದೆ ಎಂದೇ ಹೇಳಿಕೊಂಡು ಬಂದ್ದಿದ್ದೀವಿ, ಹಾಗಾಗಿ ಇದು ಹೊಸದೇನಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಅದಕ್ಕೆ ಸೀಲ್ (ಮುದ್ರೆ) ಹೊಡೆದಿದ್ದಾರೆ. ಖಂಡಿತವಾಗಿಯೂ ಚುನಾವಣೆಗೂ ಮುನ್ನವೇ ನಾವು ಕೋವಿಡ್ ಹಗರಣ ತನಿಖೆ ಮಾಡ್ತೀವಿ ಎಂದರು.

ಬಳಿಕ ವೀರಶೈವ ಮಹಾಸಭಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸುವ ಮಹಾಸಭಾದ ನಿರ್ಣಯಕ್ಕೆ ಯತ್ನಾಳ ವಿರೋಧ ವಿಚಾರವಾಗಿ ಮಾತನಾಡಿ, ನಾನು ಯತ್ನಾಳ ಹೇಳಿಕೆಗೆ ಪ್ರತ್ಯುತ್ತರ ಕೊಡೋಕೆ ಹೋಗಲ್ಲ. ವೀರಶೈವ ಸಮುದಾಯ ಇರಬಹುದು, ಪಂಚಮಸಾಲಿ ಸಮುದಾಯ ಇರಬಹುದು ಒಟ್ಟಾರೆ ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಅನ್ನೋದೇ ನಮ್ಮ ಆಶಯ ಎಂದು ಹೇಳಿದರು.

ಮುರುಗೇಶ್ ನಿರಾಣಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಮೊನ್ನೆ ನಿರಾಣಿಯವರ ಹೇಳಿಕೆ ಗಮನಿಸಿದ್ದೇನೆ. 2ಡಿ ಅಂತ ಮಾಡಿದ್ದು ಬಿಜೆಪಿ ಸರ್ಕಾರ. ಅದು ಈಗ ಕೋರ್ಟ್ ಮೆಟ್ಟಿಲೇರಿದೆ. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಲಿಕ್ಕೆ ಸಾಧ್ಯನಾ!? ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಸಚಿವೆ ಹೆಬ್ಬಾಳ್ಕರ್ ಟಾಂಗ್ ನೀಡಿದರು.

ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನಿನ್ನೆ ಮುಖ್ಯಮಂತ್ರಿಗಳು ಬಹಳ ಒಳ್ಳೆಯ ಸ್ಟೇಟ್‌ಮೆಂಟ್‌ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನಾನೊಬ್ಬ ರೈತನ ಮಗಳು, ನಾನೇನೂ ಅದರ ಬಗ್ಗೆ ಜಾಸ್ತಿ ಮಾತನಾಡೋದಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಟಿಕೆಟ್‌ ನಿಮ್ಮ ಕುಟುಂಬದವರಿಗೆ ಬಯಸಿದ್ದೀರಾ ಎಂಬ ಪ್ರಶ್ನೆಗೆ, ಹಾಗೇನೂ ಇಲ್ಲ. ಹೈಕಮಾಂಡ್​ ಹಾಗೂ ನಮ್ಮ ಜಿಲ್ಲೆಯ ಮುಖಂಡರು ಯಾರಿಗೆ ಮಾಡಬೇಕು ಅಂತ ಹೇಳ್ತಾರೆ ಅವರಿಗೆ ನಾವೆಲ್ಲರೂ ಸಪೋರ್ಟ್‌ ಮಾಡ್ತಾ ಇದೀವಿ ಎಂದರು.

ಗೃಹಲಕ್ಷ್ಮೀ ಯೋಜನೆಗಳ ಕುರಿತಾದ ಗೊಂದಲಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಲ್ಲಿ ಗೊಂದಲಗಳೇನೂ ಇಲ್ಲ. 1 ಕೋಟಿ 25 ಲಕ್ಷ ಕುಟುಂಬಗಳಿಗೆ ದುಡ್ಡು ಹೋಗ್ಬೇಕು ಅಂತ ನಾವು ಫಸ್ಟ್‌ ಅನೌನ್ಸ್‌ ಮಾಡಿದ್ವಿ. ಇಲ್ಲಿವರೆಗೆ 1 ಕೋಟಿ 14 ಲಕ್ಷ ಜನ ರಿಜಿಸ್ಟ್ರೇಶನ್‌ ಮಾಡಿಸ್ಕೊಂಡಿದ್ದಾರೆ. ಅದರಲ್ಲಿ 1 ಕೋಟಿ 17 ಲಕ್ಷ ಜನರಲ್ಲಿ 1 ಕೋಟಿ 15 ಲಕ್ಷ ಜನರಿಗೆ ದುಡ್ಡು ಹೋಗ್ತಾ ಇದೆ. ಒಂದೂವರೆಯಿಂದ ಎರಡು ಲಕ್ಷ ಜನರಿಗೆ ಸ್ಪಲ್ಪ ಕನ್ಫೂಷನ್‌ ಇತ್ತು. ಇವತ್ತು ನಾಳೆ ನಾಡಿದ್ದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಹ ಗೃಹಲಕ್ಷ್ಮೀಯ ಅದಾಲತ್‌, ಗೃಹಲಕ್ಷ್ಮೀಯ ಕ್ಯಾಂಪ್‌ ಅಂತ ಮಾಡಿ ಪಿಡಿಓಗಳನ್ನು ನಮ್ಮ ಸೇವಾಸಿಂಧು ಸಿಬ್ಬಂದಿಯನ್ನು ಗ್ರಾಮ ಒನ್‌ದವರನ್ನು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಅಧಿಕಾರಿಗಳನ್ನ ಕರೆಸಿ ಈ ಮೂರು ದಿನದಲ್ಲಿ ಉಳಿದವರಿಗೆ ಹಣ ಕೊಡಿಸಲು ಪ್ರಯತ್ನ ಮಾಡ್ತೀನಿ ಎಂದರು.

ಪಠ್ಯಕ್ರಮದಲ್ಲಿ ಸಿದ್ಧೇಶ್ವರ ಶ್ರೀಗಳ ಬಗ್ಗೆ ಅಳವಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಿ. ಸಿದ್ಧೇಶ್ವರ ಶ್ರೀಗಳು ಮಹಾನ್ ಸಂತರು. ಸಮಾಜಕ್ಕೆ ಸಿದ್ಧೇಶ್ವರ ಶ್ರೀಗಳು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಸಮಾಜದ ಅಂಕು ಡೊಂಕು ತಿದ್ದಲು ಸಂದೇಶ ನೀಡಿದ್ದಾರೆ. ಸಿದ್ಧೇಶ್ವರ ಶ್ರೀಗಳ ಸಂದೇಶ ಮಕ್ಕಳಿಗೆ ತಿಳಿಯಲು ಪಠ್ಯಕ್ರಮದಲ್ಲಿ ಬಂದ್ರೇ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ನಗರ ಜೆಡಿಎಸ್ ಪ್ರಮುಖರ ಸಭೆ: ಮಹತ್ವದ ವಿಷಯಗಳ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.