ETV Bharat / state

ವಿಜಯಪುರ: ಹೊಟ್ಟೆಪಾಡಿಗಾಗಿ ಅನ್ಯ ರಾಜ್ಯಗಳಿಗೆ ಜನರ ಗುಳೆ

ವಿಜಯಪುರ ಜಿಲ್ಲೆಯ ಜನರು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರ, ಗೋವಾ ಸೇರಿದಂತೆ ಹಲವು ರಾಜ್ಯಗಳಿಗೆ ದುಡಿಯಲು ಗುಳೆ ಹೋಗ್ತಿದ್ರು. ಕೊರೊನಾ ಭೀತಿಯಿಂದ ತವರಿಗೆ ಮರಳಿದ ಕಾರ್ಮಿಕರು, ಮತ್ತೆ ದುಡಿಮೆಗಾಗಿ ತಾವಿರುವ ಜಾಗ ಖಾಲಿ ಮಾಡ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

Migration
ಗುಳೆ
author img

By

Published : Nov 2, 2020, 4:27 PM IST

ವಿಜಯಪುರ: ಬಿಸಿಲು ನಾಡು ಗುಮ್ಮಟ ನಗರಿಯಲ್ಲಿ ಪಂಚ ನದಿಗಳಿದ್ದರೂ ಜನರಿಗೆ ದುಡಿಮೆ ಇಲ್ಲ. ಹೀಗಾಗಿ ನೆರೆಯ ಮಹಾರಾಷ್ಟ್ರ, ಗೋವಾ, ದಕ್ಷಿಣ ಕರ್ನಾಟಕ ಭಾಗಕ್ಕೆ ಜಿಲ್ಲೆಯ ಜನರು ದುಡಿಮೆ ಮಾಡಲು ಹೋಗುವ ಅನಿವಾರ್ಯತೆ ಹಲವು ವರ್ಷಗಳಿಂದ ಇದೆ. ಜಿಲ್ಲೆಯ ಇಂಡಿ, ಸಿಂದಗಿ, ಬಸವನ ಬಾಗೇವಾಡಿ ಸೇರಿದಂತೆ ಹಲವು ತಾಲೂಕುಗಳ ಜನರು ದುಡಿಮೆ ಅರಸಿಕೊಂಡು ಗುಳೆ ಹೋಗ್ತಿದ್ದಾರೆ‌.

ಬಡವರಿಗೆ ಉದ್ಯೋಗ ನೀಡಲು ಹಲವು ಯೋಜನೆಗಳಿದ್ರು ಇಲ್ಲಿನ ಜನರಿಗೆ ಸಮರ್ಪಕವಾಗಿ ತಲುಪದ ಕಾರಣ ವರ್ಷದ 8 ತಿಂಗಳು ತಮ್ಮ ಊರು, ಮನೆ-ಮಠಗಳ‌ನ್ನ ತೊರೆದು ಮಕ್ಕಳನ್ನ ಊರಲ್ಲಿ ಬಿಟ್ಟು ದುಡಿಮೆಗಾಗಿ ಹೊರ ರಾಜ್ಯಗಳ ದಾರಿ ಹಿಡಿಯುತ್ತಿದ್ದಾರೆ.

ಹೊಟ್ಟೆಪಾಡಿಗಾಗಿ ಗುಳೆ ಹೊರಟ ಜನ

ಜಿಲ್ಲೆಯಲ್ಲಿ‌ ಕೈಗಾರಿಕೆಗಳ ಕೊರತೆ, ಹಲವು ತಾಲೂಕುಗಳಿಗೆ ಕೃಷಿ ಚಟುವಟಿಕೆ ನಡೆಸಲು ನೀರಿನ ಕೊರತೆಯಂತೆ. ಹೀಗಾಗಿ ಜೀವನ ಕಷ್ಟವಾಗ್ತಿದೆ ಎಂದು ಸಾವಿರಾರು ಜನ್ರು ದುಡಿಮೆ‌ಗಾಗಿ 8 ತಿಂಗಳ ಕಾಲ ಹೊರ ರಾಜ್ಯಗಳನ್ನೇ ಅಲಂಬಿಸುವಂತಾಗಿದೆ.

ಇತ್ತ ಕೊರೊನಾ ಭೀತಿಯಿಂದ ಹೊರ ರಾಜ್ಯಗಳಲ್ಲಿ ಉಳಿದಿದ್ದ ಜಿಲ್ಲೆಯ ವಲಸೆ ಕಾರ್ಮಿಕರು ಏಪ್ರಿಲ್ ತಿಂಗಳಿನಲ್ಲಿ ವಾಪಸಾಗಿದ್ರು. ಹೀಗಾಗಿ ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಕಾರ್ಮಿಕರು, ನವರಾತ್ರಿ ಹಬ್ಬ ಮುಗಿಯುತ್ತಿದಂತೆ ಕಬ್ಬು ಕಟಾವು, ಹೊಲಗಳಲ್ಲಿ ಬದು ನಿರ್ಮಾಣ, ಬಾವಿ ತೋಡುವುದು, ಕಲ್ಲು ಒಡೆಯುವ ಕೆಲಸಗಳಿಗೆ ಅಡ್ವಾನ್ಸ್ ಹಣ ಪಡೆದು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಮರಳುತ್ತಿದ್ದಾರೆ.

ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಕಿತ್ತು ತಿನ್ನುವ ಬಡತನವಿದೆ. ಉದ್ಯೋಗ ಮಾಡಲು‌ ಕೈಗಾರಿಕೆಗಳು ಇಲ್ಲದ ಕಾರಣ ಜಿಲ್ಲೆಯಿಂದ ಲಕ್ಷಾಂತರ ಕಾರ್ಮಿಕರು ದುಡಿಮೆಗಾಗಿ ಹೊರ ರಾಜ್ಯಗಳಿಗೆ ಹೋಗುವಂತಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳ ಮೂಲಕ ಗುಳೆ ಹೋಗುವ ಜನರಿಗೆ ಉದ್ಯೋಗ ನೀಡ್ತಿಲ್ಲ. ಇತ್ತ ಜಿಲ್ಲೆಯಲ್ಲಿ ಕೈಗಾರಿಗಳಿಲ್ಲ. ಜನರು ಉದ್ಯೋಗ ಮಾಡಲು ವರ್ಷವಿಡೀ ಹೊರ ರಾಜ್ಯಗಳನ್ನೇ ಅವಲಂಬಿಸುತ್ತಿದ್ದಾರೆ. ಜಿಲ್ಲಾಡಳಿತ ಗುಳೆ ಹೋಗುವ ಕಾರ್ಮಿಕರಿಗೆ ಉದ್ಯೋಗ ನೀಡವಂತೆ ಇಲ್ಲಿನ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.