ವಿಜಯಪುರ: ಜಿಲ್ಲೆಯ ಕೆರೆ ತುಂಬಿಸುವ ಹಾಗೂ ನೀರಾವರಿ ಕಲ್ಪಿಸುವ ಉದ್ದೇಶ ನಿರ್ಮಿಸಿಲಾದ ಜನ ಸೇತುವ ಕಾಲುವೆಗೆ ಗಂಗಾ ಪೂಜೆ ನೇರೆವೇರಿಸುವುದರ ಮೂಲಕ ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಚಾಲನೆ ನೀಡಿದರು.
ಕೆರೆಗಳಿಗೆ ನೀರು ತುಂಬಿಸುವ ಹಾಗೂ ರೈತರಿಗೆ ನೀರಾವರಿ ಕಲ್ಪಿಸಲು ಕಳೆದ 2 ವರ್ಷದ ಹಿಂದೆ 280 ಕೋಟಿ ವೆಚ್ಚದಲ್ಲಿ 40 ಕಿ.ಮೀ ಜಲ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಕಾಲುವೆ ನೀರು ಬಿಡಲಾಗಿದ್ದು ಮಾಜಿ ಸಚಿವ ಎಂ.ಬಿ ಪಾಟೀಲ್, ವಿಜಯಪುರ ನಗರ ಶಾಸಕ ಬಸಗೌಡ ಪಾಟೀಲ್ ಯತ್ನಾಳ್ ಹಾಗೂ ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಕಾಲುವೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ ಕಾಲುವೆ ನೀರು ಹರಿಸಿದರು.
ಇನ್ನು ಜಲ ಮೇಲ್ಸೇತುವೆ ( ವಯಾಡ್ಯಾಕ್ಟ್) ಕಾಲುವೆ ಮೂಲಕ ಕೃಷ್ಣಾ ನದಿಯಿಂದ 60 ಸಾವಿರ ಎಕರೆ ಪ್ರದೇಶಕ್ಕೆ ಹಾಗೂ 25 ಕೆರೆಗಳಿಗೆ ಭರ್ತಿ ಮಾಡಲು ಅನುಕೂಲವಾಗಿದೆ. ಒಟ್ಟು 40 ಕಿ.ಮೀ ಜಲ ಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಆಗುತ್ತಿರುವ ಕಾರಣ ಈ ಭಾಗದ ರೈತರಿ ಅನುಕೂಲವಾಗಿದೆ. ಇನ್ನೂ ನೀರಾವರಿ ಕಾಮಗಾರಿ ಯೋಜನೆಗಳು ಪ್ರಗತಿಯಲ್ಲಿವೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ನೀರಾವರಿ ಯೋಜನೆ ಒತ್ತು ನೀಡುತ್ತಿದೆ. ನಮ್ಮ ಜಲ ಸಂಪನ್ಮೂಲ ಸಚಿವರು ಕಾಮಗಾರಿ ಪೂರ್ಣಗೊಂಡ ಬಳಿಕ ಚಾಲನೆ ನೀಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ನೀರಾವರಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.