ವಿಜಯಪುರ: ಪತಿಯೊಬ್ಬ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಗೋಡಿಹಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಮಹಾನಂದಾ ಗೊಂಡೇದ(43) ಮೃತ ಮಹಿಳೆ. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಗಂಡ-ಹೆಂಡತಿ ಜೊತೆಯಾಗಿ ಎಮ್ಮೆಗಳನ್ನು ಮೇಯಿಸಲು ಹೋದಾಗ ಕ್ಷುಲ್ಲಕ ಕಾರಣದಿಂದ ಇಬ್ಬರ ನಡುವೆ ನಡೆದ ವಾದಾ ವಿವಾದ ತಾರಕಕ್ಕೇರಿದೆ. ಪರಿಣಾಮ ಪತಿ ಬಸವರಾಜ ಗೊಂಡೇದ ತನ್ನ ಹೊಲದಲ್ಲಿ ಕಬ್ಬು ಕತ್ತರಿಸುವ ಮಚ್ಚಿನಿಂದ ಪತ್ನಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ ಆರೋಪಿ ಬಸವರಾಜ ಗೊಂಡೇದನನ್ನು ಚಡಚಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಎನ್.ಬಿ.ಸಂಕದ ಹಾಗೂ ಚಡಚಣ ಪಿಎಸ್ಐ ಮಹಾದೇವ ಎಲಿಗಾರ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.