ವಿಜಯಪುರ: ರಸ್ತೆಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಹೊರ ಭಾಗದ ರಸ್ತೆಯಲ್ಲಿ ನಡೆದಿದೆ.
ಚಾಂದಕವಟೆ ಗ್ರಾಮದ ಈರಪ್ಪ ಧರಿಕಾರ (28) ಶವವಾಗಿ ಪತ್ತೆಯಾದ ಯುವಕ. ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿರಬಹುದು ಇಲ್ಲವೇ ಯಾರೋ ಅಪರಿಚಿತರು ಕೊಲೆ ಮಾಡಿ ಶವ ರಸ್ತೆ ಮಧ್ಯೆ ಬಿಸಾಕಿರಬಹುದೆಂದು ಸಂಶಯ ವ್ಯಕ್ತವಾಗಿದೆ. ಮೃತ ಯುವಕನ ಚಪ್ಪಲಿ ಒಂದಡೇ ಬಿದ್ದು, ಶವ ಮತ್ತೊಂದು ಕಡೆ ಬಿದ್ದಿರುವುದು ಪತ್ತೆಯಾಗಿದೆ.
ಬೆಳಗ್ಗೆ ಯುವಕನ ಶವ ಗಮನಿಸಿದ ದಾರಿಹೋಕರು ಶವ ನೋಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಆದರೆ, ಮೃತ ಯುವಕನ ಸಂಬಂಧಿಕರು ಇದೊಂದು ಕೊಲೆಯಾಗಿದ್ದು, ಅವನ ಮೇಲೆ ದ್ವೇಷ ಸಾಧಿಸುತ್ತಿದ್ದವರು ಕೊಲೆ ಮಾಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.