ETV Bharat / state

ಅಕ್ರಮ ಸಿಲಿಂಡರ್ ಮಾರಾಟಗಾರರ ಮೇಲೆ ದಾಳಿ: ಓರ್ವನ ಬಂಧನ - Man arrested

ಅನಧಿಕೃತವಾಗಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್​ಗಳನ್ನು ಅಟೋಗೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 1.28 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

illegal sales  of cylinder
ಅಕ್ರಮ ಸಿಲಿಂಡರ್ ಮಾರಾಟಗಾರರ ಮೇಲೆ ದಾಳಿ: ಓರ್ವನ ಬಂಧನ
author img

By

Published : Oct 7, 2020, 7:35 AM IST

ವಿಜಯಪುರ: ಅನಧಿಕೃತವಾಗಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್​ಗಳನ್ನು ಅಟೋಗೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

illegal sales  of cylinder
ಅಕ್ರಮ ಸಿಲಿಂಡರ್ ಮಾರಾಟ: ಅಂದಾಜು 1.28 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

ಇಂಡಿ ರಸ್ತೆಯ ಕಲ್ಲಮೇಶ ಚನ್ನಪ್ಪ ಆಳೂರ ಬಂಧಿತ ಆರೋಪಿ. ಈತ ವಿಜಯಪುರದ ಜ್ಯೋತಿ ಫ್ಯಾಕ್ಟರಿ ಹಿಂಬದಿಯ ಶೆಡ್​ನಲ್ಲಿ ಅನಧಿಕೃತವಾಗಿ ಅಟೋಗಳಿಗೆ ಸಿಲಿಂಡರ್ ತುಂಬುತ್ತಿದ್ದ. ಗೃಹಪಯೋಗಿ 25 ಸಿಲಿಂಡರ್, ವಾಣಿಜ್ಯ ಬಳಕೆಯ 21, ಗ್ಯಾಸ್ ತುಂಬಲು ಬಳಸುವ ಯಂತ್ರ ಹಾಗೂ ಪೈಪ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 1.28 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಎಸ್​ಪಿ ಅನುಪಮ್ ಅಗರವಾಲ್ ಶ್ಲಾಘಿಸಿದ್ದಾರೆ.

ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.