ETV Bharat / state

ಹಳ್ಳಕ್ಕೆ ಕಾರ್ಖಾನೆಯ ಕಲುಷಿತ ನೀರು ಬಿಡದಂತೆ ಆಗ್ರಹಿಸಿ ರಸ್ತೆ ತಡೆ - Muddebihal taluk Madari village

ಬೆಳಗ್ಗೆಯಿಂದಲೇ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಗ್ರಾಮಸ್ಥರು, ನಾವು ಕಳೆದ ಆರು ವರ್ಷಗಳಿಂದ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇನ್ಮುಂದೆ ಯಾವುದೇ ಕಾರಣಕ್ಕೂ ಹಳ್ಳಕ್ಕೆ ಕಾರ್ಖಾನೆಯ ನೀರು ಬಿಡಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು.

Muddebihal taluk Madari villagers protest
ಹಳ್ಳಕ್ಕೆ ಕಾರ್ಖಾನೆಯ ಕಲುಷಿತ ನೀರು ಬಿಡದಂತೆ ಆಗ್ರಹಿಸಿ ರಸ್ತೆತಡೆ
author img

By

Published : Dec 7, 2020, 4:26 PM IST

ವಿಜಯಪುರ: ಕಾರ್ಖಾನೆಯ ಕಲುಷಿತ ನೀರು ಹಳ್ಳಕ್ಕೆ ಬಿಡಬಾರದೆಂದು ಆಗ್ರಹಿಸಿ ಮುದ್ದೇಬಿಹಾಳ ತಾಲೂಕಿನ ಮದರಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.

ಹಳ್ಳಕ್ಕೆ ಕಾರ್ಖಾನೆಯ ಕಲುಷಿತ ನೀರು ಬಿಡದಂತೆ ಆಗ್ರಹಿಸಿ ರಸ್ತೆತಡೆ

ಬೆಳಗ್ಗೆಯಿಂದಲೇ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಗ್ರಾಮಸ್ಥರು, ನಾವು ಕಳೆದ ಆರು ವರ್ಷಗಳಿಂದ ಇದೇ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಇನ್ಮುಂದೆ ಯಾವುದೇ ಕಾರಣಕ್ಕೂ ಹಳ್ಳಕ್ಕೆ ಕಾರ್ಖಾನೆಯ ನೀರು ಬಿಡಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಓರ್ವ ಸಾವು, ಮತ್ತಿಬ್ಬರಿಗೆ ಗಾಯ

ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸ್​​ಐ ಮಲ್ಲಪ್ಪ ಮಡ್ಡಿ ಹಾಗೂ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ನಡೆಸಿದರು. ಇದಕ್ಕೆ ಒಪ್ಪದ ರೈತರು, ಪ್ರತಿಭಟನೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.