ETV Bharat / state

ಯತ್ನಾಳ ಬೆಂಬಲಿಗರಿಗೆ ಫೇಸ್​​​​ಬುಕ್​​ನಲ್ಲೇ ಟಾಂಗ್ ಕೊಟ್ಟ ಕರವೇ ಮುಖಂಡ

ಕರವೇ ಜಿಲ್ಲಾಧ್ಯಕ್ಷರು ತಮ್ಮ ಫೇಸ್​ಬುಕ್ ಖಾತೆ ಮುಖಾಂತರ ಯತ್ನಾಳ ಬೆಂಬಲಿಗರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

karave Leader post against protests in Karnataka Bund
ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪ್ರತಿಭಟನಾಕಾರಿಗೆ ಟಾಂಗ್ ನೀಡಿದ ಕರವೇ ಮುಖಂಡ
author img

By

Published : Nov 23, 2020, 11:42 AM IST

ವಿಜಯಪುರ: ಕರ್ನಾಟಕ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಕರವೇ ಜಿಲ್ಲಾಧ್ಯಕ್ಷ ಎಂ ಸಿ ಮುಲ್ಲಾ ಸಾಮಾಜಿಕ‌ ಜಾಲತಾಣದ ಮೂಲಕ ನಿನ್ನೆ ಪ್ರತಿಭಟನೆ ನಡೆಸಿದ ಜನರಿಗೆ ಟಾಂಗ್ ನೀಡಿದ್ದಾರೆ.

ಕರವೇ ಜಿಲ್ಲಾಧ್ಯಕ್ಷ ತಮ್ಮ ಫೇಸ್ ಬುಕ್ ಖಾತೆಯಿಂದ ಯತ್ನಾಳ ಬೆಂಬಲಿಗರ ವಿರುದ್ಧ ಪೋಸ್ಟ್ ಹಾಕುವ ಮೂಲಕ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಒಂದೇ ಹೊಡತಕ್ಕೆ ಯತ್ನಾಳರ ಗಂಜಿ ಗಿರಾಕಿಗಳ ಕೈಯಲ್ಲಿ ನಾಡಧ್ವಜ ಬಂದಿದೆ. ಕೊರಳಲ್ಲಿ ಕನ್ನಡ ಬಾವುಟದ ಶಲ್ಯ ಬಂದಿದೆ ಎಂದು ಕರವೇ ಜಿಲ್ಲಾ ಮುಖಂಡ ಕರ್ನಾಟಕ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನು ನಿನ್ನೆಯ ದಿನ ವಿವಿಧ ಪರ ಸಂಘಟನೆಗಳು ಹಾಗೂ ಶಾಸಕ ಯತ್ನಾಳ ಅಭಿಮಾನಿಗಳು ಡಿ‌‌. 05 ರಂದು ಕರ್ನಾಟಕ ಬಂದ್ ಮಾಡಬಾರದು. ವಿಜಯಪುರದಲ್ಲಿ ಹೇಗೆ ಬಂದ್ ಮಾಡ್ತಾರೋ ನಾವು ನೋಡ್ತಿವಿ ಎಂದು ಪ್ರತಿಭಟನಾ ಭಾಷಣ ಮಾಡಿದ್ದರು. ಈ ಬೆನ್ನಲ್ಲೆ, ಪರ ವಿರೋಧ ಚರ್ಚೆಗಳ ಕಾವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದ್ದು, ಭೂತ ದಹನ‌ ಮಾಡುವಾಗ ಎಲ್ಲಿಗೆ ಅಡಗಿ ಕುಳಿತಿದ್ದೇ ನೀನು ಎನ್ನುವ ಪೋಸ್ಟ್‌ ಹರಿಬಿಡುವ ಮೂಲಕ ಕರವೇ ಜಿಲ್ಲಾಧ್ಯಕ್ಷ ಎಂ ಸಿ ಮುಲ್ಲಾ ಯತ್ನಾಳ ಬೆಂಬಲಿಗರ ವಿರುದ್ಧ ಸಿಡಿಮಿಸಿಗೊಂಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.