ಮುದ್ದೇಬಿಹಾಳ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ನಡೆದಿರುವ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವೇ ಹತ್ತಿಕ್ಕುವ ತಂತ್ರ ನಡೆಸಿದ್ದಾರೆ ಎಂದು ಓಬಿಸಿ 2ಎ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮರಾಜ ಬಿರಾದಾರ ಆರೋಪಿಸಿದ್ದಾರೆ.
ಸಿಎಂ ಅವರಿಂದಲೇ ಪಂಚಮಸಾಲಿಗಳ ಹೋರಾಟ ಹತ್ತಿಕ್ಕುವ ತಂತ್ರ: ಬಿರಾದಾರ ಆರೋಪ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿದರೆ ಸಿಎಂಗೆ ಸನ್ಮಾನಿಸುತ್ತೇವೆ. ಇಲ್ಲದಿದ್ದರೆ ಅವರನ್ನು ಖುರ್ಚಿಯಿಂದ ಕೆಳಗಿಳಿಸುವುದು ನಿಶ್ಚಿತ ಎಂದು ಕಾಮರಾಜ ಬಿರಾದಾರ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ಆರೋಪ
ಮುದ್ದೇಬಿಹಾಳ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ನಡೆದಿರುವ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವೇ ಹತ್ತಿಕ್ಕುವ ತಂತ್ರ ನಡೆಸಿದ್ದಾರೆ ಎಂದು ಓಬಿಸಿ 2ಎ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮರಾಜ ಬಿರಾದಾರ ಆರೋಪಿಸಿದ್ದಾರೆ.
ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಮಾತನಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.21ರಂದು ನಡೆಯಲಿರುವ ಪಂಚಮಸಾಲಿ ಸಮಾವೇಶಕ್ಕೆ ವಿಜಯಪುರ ಜಿಲ್ಲೆಯಿಂದ ಅಂದಾಜು 60 ಸಾವಿರ ಜನರು ತೆರಳಲಿದ್ದಾರೆ. ಪಂಚಮಸಾಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಊರುಗಳಿಂದ ಬಸ್‌ಗಳು, ಟ್ರ್ಯಾಕ್ಟರ್ಗಳನ್ನು ಮಾಡಿಕೊಂಡು ಸಮಾವೇಶಕ್ಕೆ ತೆರಳಲಾಗುತ್ತಿದ್ದು ಬಸ್‌ಗಳ ವ್ಯವಸ್ಥೆಯನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಶೈಲ ದೊಡಮನಿ, ಗ್ರಾ.ಪಂ. ಮಾಜಿ ಸದಸ್ಯ ಗುರುಲಿಂಗಪ್ಪ ಸುಲ್ಲಳ್ಳಿ, ಸಂಗಮೇಶ ಹಾರಿವಾಳ ಮತ್ತಿತರರು ಇದ್ದರು.