ETV Bharat / state

ಬಾಯ್ತುಂಬ ಗುಟ್ಕಾ ರಸ್ತೆ ತುಂಬ ಕೆಂಪು ಕೆಂಪು ಕಲೆಗಳು.. ಹಿಂಗಾದ್ರೇ ಹೆಂಗ್‌ ಅಂತೀನಿ.. - ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ತಂಬಾಕು ಸೇವನೆ

ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ನಾವು ಸಾರ್ವಜನಿಕರಿಗೆ ‌ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜರುಗಿಸ್ತೇವೆ ಅಂತಿದ್ದಾರೆ..

Increased corona anxiety in Vijayapura
ವಿಜಯಪುರದಲ್ಲಿ ಹೆಚ್ಚಾದ ಕೊರೊನಾ ಆತಂಕ
author img

By

Published : Jul 6, 2020, 9:27 PM IST

ವಿಜಯಪುರ: 500ಕ್ಕೂ ಅಧಿಕ‌ ಕೊರೊನಾ ಪ್ರಕರಣಗಳಿರುವ ಗುಮ್ಮಟ ನಗರಿಯಲ್ಲಿ ಸದ್ಯ ಕೊರೊನಾ ಆತಂಕ‌ ಜನರಲ್ಲಿ ‌ಕಾಡ್ತಿದೆ.

ರಸ್ತೆಗಳಲ್ಲಿ ಜನ ಸಂಚಾರ ಹೆಚ್ಚಾಗಿದೆ. ಮುಖಕ್ಕೆ ಮಾಸ್ಕ್ ಧರಿಸದೇ ಸಾರ್ವಜನಿಕರು ಓಡಾಟ ನಡೆಸಿದ್ದಾರೆ. ಹಾಗೂ ಗುಟ್ಕಾ, ತಂಬಾಕು ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುತ್ತಿದ್ದಾರೆ. ಇದು ಕೊರೊನಾ‌‌‌ ಆತಂಕ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ನಿನ್ನೆ ಒಂದೇ ದಿನ‌ ಜಿಲ್ಲೆಯಲ್ಲಿ 51 ಜನರಿಗೆ ಸೋಂಕು ತಲುಲಿದೆ. ಇತ್ತ ಕೋವಿಡ್ ತಡೆಗೆ ಸರ್ಕಾರ ಮಾರ್ಗ ಸೂಚಿಗಳು ಸರಿಯಾಗಿ ಪಾಲನೆ‌‌‌ಯಾಗದೇ, ಮತ್ತಷ್ಟು ಜನರಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿ‌ದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನ ತಡೆಯಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ವಿಜಯಪುರದಲ್ಲಿ ಹೆಚ್ಚಾದ ಕೊರೊನಾ ಆತಂಕ

ಕೊರೊನಾ ಭಯದಿಂದ ಸಾರ್ವಜನಿಕ ಕಚೇರಿಗಳು ಸೀಲ್‌ಡೌನ್ ಆಗತೊಡಗಿವೆ‌. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು‌ ಸೇವನೆ, ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿರುವ ಜನರಿಗೆ ಮಹಾನಗರ ಪಾಲಿಕೆ‌ ದಂಡ ವಿಧಿಸಿ ಬಿಸಿ ಮುಟ್ಟಿಸುವ ಕಾರ್ಯ ಮಾಡುತ್ತಿತ್ತು. ಆದರೆ, ಈಗ ಪಾಲಿಕೆ ಅಧಿಕಾರಿಗಳು ಅದನ್ನು ಕೈಬಿಟ್ಟಿದ್ದಾರೆ‌.

ಹೀಗಾಗಿ ನಗರದ ಪ್ರಮುಖ ಸ್ಥಳ‌ ಹಾಗೂ ಜನದಟ್ಟಣೆ ಪ್ರದೇಶಲ್ಲಿ ಜನ ಉಗುಳುತ್ತಿರೋದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.‌ ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ನಾವು ಸಾರ್ವಜನಿಕರಿಗೆ ‌ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ.

ನಗರದಲ್ಲಿ ಈ ಎಲ್ಲಾ ಬೆಳವಣಿಗೆಗಳು ಕೊರೊನಾ‌ ಹೆಚ್ಚಳಕ್ಕೆ ನಾಂದಿ ಹಾಡುತ್ತಿವೆ. ಜನರಲ್ಲಿ ಭಯ ಮನೆ ಮಾಡಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಇವುಗಳನ್ನ ತಡೆಯುವ ಕಾರ್ಯಕ್ಕೆ ಮುಂದಾಗಲಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.