ETV Bharat / state

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ: ತುಳಜಾಭವಾನಿಗೆ ಇಲ್ಲಿ ಅಸಂಖ್ಯಾತರೇ ಭಕ್ತರು

ನಾಡಹಬ್ಬ ದಸರಾ ಆಚರಣೆಗೆ ವಿಜಯಪುರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಂಭತ್ತು ದಿನ ನಡೆಯುವ ನವರಾತ್ರಿಯಲ್ಲಿ ದಾಂಡಿಯಾ, ಗೊಂದಳಿ, ವಿಶೇಷ ಪೂಜಾ ಕೈಂಕರ್ಯಗಳು ಬಹು ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಲಿವೆ.

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ
author img

By

Published : Sep 23, 2019, 6:13 PM IST

ವಿಜಯಪುರ: ನಾಡಹಬ್ಬ ದಸರಾ ಆಚರಣೆಗೆ ಜಿಲ್ಲೆ ಸಿದ್ಧವಾಗ್ತಿದ್ದು, ನೆರೆಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಬಾದ್ ಜಿಲ್ಲೆಯ ತುಳಜಾಭವಾನಿ ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ, ಆದಿಶಕ್ತಿ ಸ್ವರೂಪಿಣಿ ತಾಯಿ ತುಳಜಾಭವಾನಿಗೆ ವಿಜಯಪುರದಲ್ಲಿ ಅಸಂಖ್ಯಾತ ಭಕ್ತರಿದ್ದಾರೆ.

ಒಂಭತ್ತು ದಿನ ನಡೆಯುವ ನವರಾತ್ರಿಯಲ್ಲಿ ದಾಂಡಿಯಾ, ಗೊಂದಳಿ, ವಿಶೇಷ ಪೂಜಾ ಕೈಂಕರ್ಯಗಳು ಬಹು ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಲಿವೆ. ವಿಜಯಪುರ ನಗರದಲ್ಲಿಯೇ
ತುಳಜಾಭವಾನಿಯ ಸುಮಾರು 9 ದೇವಸ್ಥಾನಗಳು ಇವೆ‌. ಈ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜೆ, ಹೋಮ ಹವನ ಆಯೋಜಿಸುತ್ತಾರೆ.

ದಸರಾ ಆಚರಣೆಗೆ ಸಿದ್ಧವಾಗ್ತಿದೆ ವಿಜಯಪುರ

ವಿವಿಧ ಗಲ್ಲಿಗಳಲ್ಲಿ ಸಾರ್ವಜನಿಕರು ದೇವಿ ಮೂರ್ತಿ ಪ್ರತಿಷ್ಠಾಪಿಸಿ ದಾಂಡಿಯಾ, ವಿವಿಧ ಸಾಂಸ್ಕೃತಿಕ, ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿ, ಶಹಾಪೇಟ ,ಮಠಪತಿ ಗಲ್ಲಿ, ಜೋರಾಪುರ ಪೇಠ, ಶಾಹು ನಗರ, ಕೋರಿ ಚೌಕ್, ಮಿಲನ ಸರ್ಕಲ್ ಸೇರಿದಂತೆ ಹತ್ತು ಹಲವು ಕಡೆ ಸಾರ್ವಜನಿಕರು ದೇವಿ ಪ್ರತಿಷ್ಠಾಪಿಸಿ ಭಕ್ತಿ ಮೆರೆಯುತ್ತಾರೆ.

ವಿಜಯದಶಮಿಯ ಐದನೇ ದಿನಕ್ಕೆ ಬರೋ ಶೀಗಿ ಹುಣ್ಣಿಮೆ ಅಥವಾ ಕೋಜಗಿರಿ ಹುಣ್ಣಿಮೆಯಂದು ತುಳಜಾಪುರದಲ್ಲಿ ಅಭಿಷೇಕ ನಡೆಯುತ್ತದೆ. ತುಳಜಾಪುರಕ್ಕೆ ಪಾದಯಾತ್ರೆ ಮೂಲಕ ಹೋಗಿ ಅಭಿಷೇಕದಲ್ಲಿ ಪಾಲ್ಗೊಂಡ್ರೆ ತಾಯಿಯ ಕೃಪಾಕಟಾಕ್ಷ ಇರುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿ ಇದೆ.

Intro:ವಿಜಯಪುರ Body:ವಿಜಯಪುರ: ವಿಜಯಪುರದಲ್ಲಿ ಗಣೇಶೋತ್ಸವ ಸಂಭ್ರಮದಿಂದ ಮುಕ್ತಾಯಗೊಂಡಿದೆ. ಗಣೇಶೋತ್ಸವ ದ ಒಂದು ತಿಂಗಳ ನಂತರ ಬರುವ ದಸರಾ ಆಚರಣೆಗೆ ವಿಜಯಪುರ ಸಿದ್ಧವಾಗ್ತಿದೆ. ನೆರೆಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಬಾದ್ ಜಿಲ್ಲೆಯ ತುಳಜಾಭವಾನಿ ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ, ಆದಿಶಕ್ತಿ ಸ್ವರೂಪಿಣಿ ತಾಯಿ ತುಳಜಾಭವಾನಿಗೆ ವಿಜಯಪುರ ದಲ್ಲಿ ಅಸಂಖ್ಯಾತ ಭಕ್ತರಿದ್ದಾರೆ. ಒಂಭತ್ತು ದಿನ ನಡೆಯುವ ನವರಾತ್ರಿಯಲ್ಲಿ ದಾಂಡಿಯಾ, ಗೊಂದಳಿ, ವಿಶೇಷ ಪೂಜಾ ಕೈಂಕರ್ಯ ಗಳು ಬಹು ಸಂಭ್ರಮದ ಹಾಗೂ ಭಕ್ತಿಯಿಂದ ನೇರವೇರುತ್ತವೆ. ವಿಜಯಪುರ ನಗರದಲ್ಲಿ ಯೇ
ತುಳಜಾಭವಾನಿ ಸುಮಾರು ೯ ದೇವಸ್ಥಾನಗಳು ಇವೆ‌. ಈ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಸೇರಿದಂತೆ ವಿವಿಧ ಪೂಜೆ, ಹೋಮ ಹವನ ಆಯೋಜಿಸುವ ಮೂಲಕ ಭಕ್ತರು ತಾಯಿ ಕಾಪಾಡು ಅಮ್ಮಾ ಎಂದು ಪ್ರಾರ್ಥಿಸುತ್ತಾರೆ. ವಿವಿಧ ಗಲ್ಲಿಗಳಲ್ಲಿ ಸಾರ್ವಜನಿಕ ದೇವಿ ಮೂರ್ತಿ ಪ್ರತಿಷ್ಠಾಪಿಸಿ ದಾಂಡಿಯಾ, ವಿವಿಧ ಸಾಂಸ್ಕೃತಿಕ, ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿ, ಶಹಾಪೇಟ,ಮಠಪತಿ ಗಲ್ಲಿ, ಜೋರಾಪುರ ಪೇಠ, ಶಾಹು ನಗರ, ಕೋರಿ ಚೌಕ್, ಮಿಲನ ಸರ್ಕಲ್ ಸೇರಿದಂತೆ ಹತ್ತು ಹಲವು ಕಡೆ ಸಾರ್ವಜನಿಕ ದೇವಿ ಪ್ರತಿಷ್ಠಾಪಿಸಿ ಭಕ್ತಿ ಮೆರೆಯುತ್ತಾರೆ. ಗುಮ್ಮಟನಗರಿ ಯಲ್ಲಿ ಇದೆ ಸೆ.೨೯ ರಿಂದ ನವರಾತ್ರಿ ಪ್ರಾರಂಭವಾಗಲಿದೆ. ಅಲ್ಲಲ್ಲಿ ಪ್ರವಚನ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ. ಒಂಭತ್ತು ದಿನಗಳ ಕಾಲ ಮನೆಯಲ್ಲಿ ದೀಪಾರಾಧನೆ ನಡೆಯುತ್ತದೆ. ಒಂಭತ್ತು ದಿನ ಒಂಭತ್ತು ರೂಪದಲ್ಲಿ ಕಂಗೊಳಿಸುವ ತಾಯಿ ಭವಾನಿಗೆ ದಿನಕ್ಕೆ ಎರಡರಿಂದ ಐದು ಸೀರೆ ಅಲಂಕಾರ, ಪುಷ್ಪ ಅಲಂಕಾರ ಮತ್ತು ಅಭಿಷೇಕ ನಡೆಸಲಾಗುತ್ತದೆ.
ವಿಜಯದಶಮಿಯ ಐದನೇ ದಿನಕ್ಕೆ ಬರೋ ಶೀಗಿ ಹುಣ್ಣಿಮೆ ಅಥವಾ ಕೋಜಗಿರಿ ಹುಣ್ಣಿಮೆಯಂದು ತುಳಜಾಪುರದಲ್ಲಿ ಅಭಿಷೇಕ ನಡೆಯುತ್ತದೆ. ತುಳಜಾಪುರ ಕ್ಕೆ ಪಾದಯಾತ್ರೆ ಮೂಲಕ ಹೋಗಿ ಅಭಿಷೇಕದಲ್ಲಿ ಪಾಲ್ಗೊಂಡ್ರೆ ತಾಯಿಯ ಕೃಪಾಕಟಾಕ್ಷವಿರುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿ ಇದೆ.
ಜಿಲ್ಲೆಯಿಂದಲೇ ಒಂದುವರೆ ಲಕ್ಷಕ್ಕೂ ಹೆಚ್ಚು ಭಕ್ತರು ಸೋಲಾಪುರದಿಂದ ಪಾದಯಾತ್ರೆ ಮಾಡಿದ್ರೆ, ವಿಜಯಪುರ ನಗರದ ಡುಬಳೆ ಗಲ್ಲಿಯ ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ವಿಜಯಪುರದಿಂದಲೇ ಪಾದಯಾತ್ರೆ ಹೊರಡೋದು ವಿಶೇಷವಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.