ವಿಜಯಪುರ: ನಗರದ ಭೂತನಾಳ ತಾಂಡಾದಿಂದ ಅಕ್ರಮವಾಗಿ ಸಿಂದಗಿ ತಾಲೂಕಿನ ಚಿಕ್ಕರೂಗಿಗೆ ಕಳ್ಳಭಟ್ಟಿ ಸಾಗಿಸುತ್ತಿದ್ದ ಮೂವರನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ರಾಜಣ್ಣ, ರಾಜಾಭಕ್ಷ ಹಾಗೂ ಪ್ರವೀಣ್ ಎಂಬುವವರ ವಿರುದ್ಧ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.