ವಿಜಯಪುರ: ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಹಂಜಗಿ ರಸ್ತೆಯ ಹೊರವಲಯಲ್ಲಿ ನಡೆದಿದೆ.
ಭುವನೇಶ್ವರಿ ಮಾಳಪ್ಪ ಪೂಜಾರಿ (25) ಹತ್ಯೆಯಾಗಿರುವ ಮಹಿಳೆ. ವಿಜಯಪುರ ಜಿಲ್ಲೆಯ ಇಂಡಿ ನಗರದ ಹೊರವಲಯದ ಹಂಜಗಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಡಲಿಯಿಂದ ಕೊಚ್ಚಿ ಪಾಪಿ ಪತಿ ಮಾಳಪ್ಪ ಪೂಜಾರಿ ಹತ್ಯೆ ಮಾಡಿದ್ದಾನೆ. ಹತ್ಯೆಗೈದ ಪತಿ ಮಾಳಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.