ವಿಜಯಪುರ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು ಆಲಮಟ್ಟಿ ಜಲಾಶಯದಲ್ಲಿನ ಒಳಹರಿವು ಹೆಚ್ಚಾಗಿದೆ.
ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದರ ಪರಿಣಾಮ ರೈತರ ಬಿತ್ತನೆ ಕೆಲಸ ಕಾರ್ಯಕ್ಕೆ ಅನುಕೂಲವಾಗಿದೆ.
ಮಹಾರಾಷ್ಟ್ರ ಮತ್ತು ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾಗಿದ್ದು ನೀರಿನ ಮಟ್ಟ14592 ಮೀಟರ್ಗೆ ಏರಿಕೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಈ ವಾರ ನಿತ್ಯ ಮಳೆಯ ದರ್ಶನ ಜಿಲ್ಲೆಯ ಜನತೆಗೆ ಆಗಲಿದೆ.