ವಿಜಯಪುರ: ನಗರದ ಜಿಲ್ಲಾ ನ್ಯಾಯಾಲಯ ಕಟ್ಟಡದ ಆವರಣದಲ್ಲಿ ಇಂದು ಅಪರೂಪದ ಅತಿಥಿ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕದ ಜೊತೆಗೆ ಅಚ್ಚರಿ ಮೂಡಿಸಿತು.
ಕಾಡಿನಲ್ಲಿ ಇರಬೇಕಾದ ನರಿಯೊಂದು ನಾಡಿಗೆ ಬಂದಿದ್ದು, ಅದನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ದರು. ನರಿ ಪ್ರತ್ಯಕ್ಷ ವಾಗಿದ್ದನ್ನು ಕಕ್ಷಿದಾರರಲ್ಲದೇ ನ್ಯಾಯವಾದಿಗಳೂ ಸಹ ಕುತೂಹಲದ ಕಣ್ಣುಗಳಿಂದ ನೋಡಿದರು.
ನರಿಯನ್ನು ಹಿಡಿಯಲು ಪ್ರಾಣಿ ರಕ್ಷಕ ಕಲ್ಮೇಶ ಆಳೂರು ಅವರನ್ನು ಕರೆಯಿಸಲಾಯಿತು. ಅವರು ಸ್ಥಳಕ್ಕೆ ಬಂದು ನರಿಯನ್ನು ಸುರಕ್ಷಿತವಾಗಿ ಹಿಡಿದು ಚೀಲದಲ್ಲಿ ಹಾಕಿ ಅರಣ್ಯಾಧಿಕಾರಿಗಳ ಸುಪರ್ದಿಗೆ ನೀಡಿದರು. ಬಳಿಕ ಅರಣ್ಯಾಧಿಕಾರಿಗಳು ಡೋಣಿ ನದಿಯ ತಟದಲ್ಲಿ ಬಿಟ್ಟಿದ್ದಾರೆ.