ETV Bharat / state

ಬಸನಗೌಡ ಪಾಟೀಲ ಯತ್ನಾಳಗೆ ರಾಜಕೀಯ ಬದ್ಧತೆ ಇಲ್ಲ: ಅಪ್ಪಾಸಾಹೇಬ ಪಟ್ಟಣಶೆಟ್ಟಿ - outrage against bsanagouda yathnal

ಶಾಸಕ ಬಸನಗೌಡ ಪಾಟೀಲ ಯತ್ನಾಳರಲ್ಲಿ ರಾಜಕೀಯದ ಬಗ್ಗೆ ಬದ್ಧತೆ ಇಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಾಗ್ದಾಳಿ ನಡೆಸಿದರು.

Vijayapura
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ
author img

By

Published : Jun 4, 2020, 1:51 PM IST

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಬಿಲ್ಡಪ್ ರಾಜಕಾರಣಿ. ಅವರು ಪ್ರಚಾರಕ್ಕಾಗಿ ಯಾರನ್ನಾದರೂ ಹೊಗಳುತ್ತಾರೆ ಇಲ್ಲವೇ ತೆಗಳುತ್ತಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳರಲ್ಲಿ ರಾಜಕೀಯದ ಬಗ್ಗೆ ಬದ್ಧತೆ ಇಲ್ಲ. ಈ ಹಿಂದೆ ಯತ್ನಾಳ್‌ ಅವರು ಯಡಿಯೂರಪ್ಪ ಅವರನ್ನು ಹೊಗಳುತ್ತಿದ್ದರು. ಆದ್ರೆ, ಈಗ ತೆಗಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ​ಶಾ ಬಗ್ಗೆ ಮಾತನಾಡುವುದನ್ನು ಅವರು‌ ಬಿಟ್ಟಿಲ್ಲವೆಂದು ವ್ಯಂಗ್ಯವಾಡಿದರು.

ಮಾಧ್ಯಮವರೊಂದಿಗೆ ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ತನಗೆ ವಿಜಯಪುರ ನಗರ ಕ್ಷೇತ್ರದ ಟಿಕೆಟ್​ ನೀಡಿದ್ದರು ಎಂದು ಪ್ರಚಾರ ಮಾಡಿದ್ದರು. ಆದರೀಗ ನರೇಂದ್ರ ಮೋದಿ, ಅಮಿತ್​ ಶಾ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಮುಂದೆ ಸಮಯ ಬಂದರೆ ಪಕ್ಷ ನನಗೆ ಹೆದರಿ ಟಿಕೆಟ್ ನೀಡಿದೆ ಎಂದು ಹೇಳಲು ಅವರು ಹಿಂಜರಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ರಾಜಕಾರಣದಲ್ಲಿ ಅವರಿಗೆ ತತ್ವ ಸಿದ್ಧಾಂತಗಳಿಲ್ಲ. ಕೋವಿಡ್-19 ವೈರಸ್ ಬಂದಾಗ ಕ್ಷೇತ್ರದ ಜನತೆ ಜೊತೆಗಿದ್ದು ಸಹಾಯಕ್ಕೆ ಬರುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಕುಳಿತು ರಾಜಕಾರಣ ಮಾಡುವುದೆಷ್ಟು ಸರಿ? ಎಂದು ಪ್ರಶ್ನಿಸಿದರು.‌

ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದಕ್ಕೆ ಪಕ್ಷದಿಂದ ನೋಟಿಸ್ ನೀಡಲಾಗಿತ್ತು. ಅದಕ್ಕವರು ಉತ್ತರ ನೀಡಿಲ್ಲ ಎಂದು ತಿಳಿದು ಬಂದಿದೆ. ಇದೇ ರೀತಿ ವರ್ತನೆ ತೋರಿದರೆ ಪಕ್ಷ ಮತ್ತೊಮ್ಮೆ ಶಿಸ್ತು ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.