ETV Bharat / state

ಮುದ್ದೇಬಿಹಾಳ ಟಿಎಪಿಸಿಎಂಎಸ್​ ಚುನಾವಣೆ; 8 ಕ್ಷೇತ್ರಕ್ಕೆ 21 ನಾಮಪತ್ರ ಸಲ್ಲಿಕೆ - ಅಂತಿಮ ಮತದಾರರ ಪಟ್ಟಿ

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಇಬ್ಬರ ನಾಮಪತ್ರಗಳನ್ನು ಸ್ವೀಕರಿಸಿದ್ದ ಚುನಾವಣಾಧಿಕಾರಿಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಜಟಾಪಟಿ ನಡೆದಿದೆ.

fight
fight
author img

By

Published : Nov 5, 2020, 7:40 PM IST

Updated : Nov 5, 2020, 8:23 PM IST

ಮುದ್ದೇಬಿಹಾಳ (ವಿಜಯಪುರ): ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಇಬ್ಬರ ನಾಮಪತ್ರಗಳನ್ನು ಸ್ವೀಕರಿಸಿದ್ದ ಚುನಾವಣಾಧಿಕಾರಿಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಾಲಿ ಸದಸ್ಯರು ಚುನಾವಣಾಧಿಕಾರಿಯೊಂದಿಗೆ ಜಟಾಪಟಿ ನಡೆಸಿದ ಘಟನೆ ಪಟ್ಟಣದ ಟಿಎಪಿಸಿಎಂಎಸ್ ಕಛೇರಿಯಲ್ಲಿ ಗುರುವಾರ ನಡೆದಿದೆ.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿತ್ತು. ಮದ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಿದವರ ಪಟ್ಟಿಯನ್ನು ನೋಟಿಸ್ ಬೋರ್ಡ್​ಗೆ ಲಗತ್ತಿಸುವ ಕೆಲಸವನ್ನು ಚುನಾವಣಾಧಿಕಾರಿ ಮಾಡಬೇಕಿತ್ತು. ಆದರೆ ನಾಮಪತ್ರ ಸಲ್ಲಿಸಿದವರ ಪೈಕಿ ಇಬ್ಬರ ನಾಮಪತ್ರಗಳನ್ನು ಅನಧಿಕೃತವಾಗಿ ಸ್ವೀಕರಿಸಲಾಗಿದೆ ಎಂದು ಸ್ಪರ್ಧಿಸಿದ್ದ ಲಿಂಗದಳ್ಳಿಯ ಬಸನಗೌಡ ಬಿರಾದಾರ, ಮುದ್ದೇಬಿಹಾಳದ ಶಾಂತಗೌಡ ಬಿರಾದಾರ ಹಾಗೂ ಅವರ ಸೂಚಕರು, ಬೆಂಬಲಿಗರಾದ ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಸಂಗನಗೌಡ ಬಿರಾದಾರ, ಸಂಗನಗೌಡ ಪಾಟೀಲ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಚುನಾವಣಾಧಿಕಾರಿಯೊಂದಿಗೆ ತೀವ್ರ ಜಟಾಪಟಿ ನಡೆಸಿದರು.

ಚುನಾವಣಾಧಿಕಾರಿಯೊಂದಿಗೆ ಜಟಾಪಟಿ

8 ಕ್ಷೇತ್ರಕ್ಕೆ 21 ನಾಮಪತ್ರ ಸಲ್ಲಿಕೆ:

ಟಿಎಪಿಸಿಎಂಎಸ್‌ನ ಬಿ ವರ್ಗದ ಸದಸ್ಯರ ಕ್ಷೇತ್ರದಲ್ಲಿ ಒಟ್ಟು ಎಂಟು ಸ್ಥಾನಗಳಿಗೆ ಆಯ್ಕೆ ಮಾಡಬೇಕಿದ್ದು, ಅದರಲ್ಲಿ 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗದಿಂದ ವಿಠ್ಠಲ ಸಿಂಗ ಹಜೇರಿ, ಬಸನಗೌಡ ಬಸರಕೋಡ, ಗುರುಸ್ವಾಮಿ ಬೂದಿಹಾಳಮಠ, ಪ್ರಕಾಶ ಪಾಟೀಲ, ಬಸನಗೌಡ ಮಾಡಗಿ, ಸುರೇಶ ಮಾಲಗತ್ತಿ, ಶಾಂತಗೌಡ ಬಿರಾದಾರ, ಗುರುಬಸಪ್ಪ ಹಿಪ್ಪರಗಿ, ಹಿಂದುಳಿದ ಎ ವರ್ಗದಿಂದ ಮಲ್ಲನಗೌಡ ಬಿರಾದಾರ, ಮುತ್ತಣ್ಣ ಮುತ್ತಣ್ಣವರ, ಗಂಗಾರಾಮ ಬಿಜಾಪೂರ, ಹಿಂದುಳಿದ 2 ವರ್ಗದಿಂದ ಪ್ರಭಾಕರ ಯಾಳವಾರ, ನಿಂಗನಗೌಡ ಗುರಡ್ಡಿ, ಎಸ್‌ಸಿ ವರ್ಗದಿಂದ ಚಿದಾನಂದ ಸೀತಿಮನಿ, ರಾಮಪ್ಪ ಕಟ್ಟಿಮನಿ, ಎಸ್‌ಟಿ ವರ್ಗದಿಂದ ಗುರಣ್ಣ ಹತ್ತೂರ, ಮಹಿಳಾ ವರ್ಗದಿಂದ ಚನ್ನಮ್ಮ ಲಕ್ಕುಂಡಿ, ಲಕ್ಷ್ಮೀಬಾಯಿ ಹಡ್ಲಗೇರಿ, ಶೋಭಾ ಜಮ್ಮಲದಿನ್ನಿ, ಶ್ರೀದೇವಿ ಮಾಲಗತ್ತಿ ನಾಮಪತ್ರ ಸಲ್ಲಿಸಿದ್ದಾರೆ.

ವಿಶೇಷ ಎಂದರೆ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ ಹಾಗೂ ನಿರ್ದೇಶಕರಾಗಿದ್ದ ಮನೋಹರ ಮೇಟಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರ ನಾಮಪತ್ರಗಳನ್ನು ಸ್ವೀಕರಿಸಿದ್ದ ಚುನಾವಣಾಧಿಕಾರಿ ಸಂತೋಷ ಇಲಕಲ್ ಅವರು, ರಜಿಸ್ಟರ್‌ನಲ್ಲಿ ಅವರ ಸಹಿಯನ್ನೂ ಪಡೆದುಕೊಂಡಿದ್ದರು.

ಈ ವಿಷಯ ತಿಳಿದ ಇತರೆ ಸದಸ್ಯರು ಮದ್ಯಾಹ್ನ 3 ಗಂಟೆ ಹೊತ್ತಿಗೆ ಅಂತಿಮವಾಗಿ ನಾಮಪತ್ರ ಸಲ್ಲಿಸಿದವರ ವಿವರವನ್ನು ಬಹಿರಂಗಪಡಿಸಬೇಕು. ಆದರೆ 3.30 ಆದರೂ ಅಂತಿಮ ನಾಮಪತ್ರ ಸಲ್ಲಿಸಿದವರ ಹೆಸರುಗಳನ್ನು ಹೇಳದೇ ಇರುವುದೇತಕ್ಕೆ? ಎಂದು ವಾಗ್ವಾದ ನಡೆಸಿದರು. ಅಂತಿಮವಾಗಿ ಚುನಾವಣಾಧಿಕಾರಿ 4 ಗಂಟೆಗೆ ನಾಮಪತ್ರ ಸಲ್ಲಿಸಿದವರ ವಿವರವನ್ನು ನೋಟಿಸ್ ಬೋರ್ಡ್​ಗೆ ಲಗತ್ತಿಸಲು ಸಂಘದ ಸಿಬ್ಬಂದಿಗೆ ತಿಳಿಸಿದರು.

ನಮ್ಮ ನಾಮಪತ್ರಗಳನ್ನು ಸ್ವೀಕರಿಸುವ ವೇಳೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂದು ಎರಡೆರಡು ಸಲ ಪರಿಶೀಲನೆ ನಡೆಸಿ ನಾಮಪತ್ರ ಸ್ವೀಕರಿಸಿದ್ದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಇಬ್ಬರು ನಾಮಪತ್ರಗಳನ್ನು ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೂ ಕಣ್ಣುಮುಚ್ಚಿ ಸ್ವೀಕರಿಸಿರುವುದರ ಹಿಂದಿನ ಮರ್ಮವೇನು? ಚುನಾವಣಾಧಿಕಾರಿ ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ? ಎಂದು ಲಿಂಗದಳ್ಳಿ ಗ್ರಾಮದ ಬಸನಗೌಡ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.

Last Updated : Nov 5, 2020, 8:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.