ETV Bharat / state

ರಸ್ತೆ ಅಪಘಾತ : ತಂದೆ, ಮಗಳು ಸಾವು, ತಾಯಿ ಸ್ಥಿತಿ ಗಂಭೀರ - ಈಟಿವಿ ಭಾರತ ಕನ್ನಡ

ಬೈಕ್​ ಮತ್ತು ಕ್ರೂಸರ್​ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ತಂದೆ ಮಗಳು ಮೃತ ಪಟ್ಟಿರುವ ಘಟನೆ ನಡೆದಿದೆ.

Kn_vjp_05_father
ರಸ್ತೆ ಅಪಘಾತದಲ್ಲಿ ತಂದೆ ಮಗಳು ಸಾವು
author img

By

Published : Nov 10, 2022, 10:24 PM IST

ವಿಜಯಪುರ: ಕ್ರೂಸರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿ ಚಲಿಸುತ್ತಿದ್ದ ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ರಸ್ತೆಯಲ್ಲಿ ನಡೆದಿದೆ.

ರಮೇಶ ನಾಟಿಕಕಾರ(45) ಮಗಳು ಖುಷಿ(8) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಶ್ರೀದೇವಿಗೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಬಸವನ ಬಾಗೇವಾಡಿ ತಾಲೂಕಿನ ಬೂದಿಗಾಳ ಗ್ರಾಮದವರು ಎಂದು ತಿಳಿದು ಬಂದಿದೆ.

ಬಾಗೇವಾಡಿ ಮೂಲಕ ಪತಿ, ಪತ್ನಿ ಹಾಗೂ ಮಗಳು ಬೈಕ್​ನಲ್ಲಿ ಚಲಿಸುತ್ತಿದ್ದಾಗ ಎದುರಿಗೆ ಬಂದ ಕ್ರೂಸರ್​ಗೆ ಬೈಕ್​ ಡಿಕ್ಕಿ ಹೊಡೆದಿದ್ದು, ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ ಹೊಡೆದ ಕೆಎಸ್ಆರ್​ಟಿಸಿ ಬಸ್.. 12ಕ್ಕೂ ಅಧಿಕ ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.