ವಿಜಯಪುರ: ರಾಜ್ಯದ ಹಲವೆಡೆ ವರುಣ ಆರ್ಭಟ ಜೋರಾಗಿದೆ. ಇತ್ತು ಬಿಸಿಲನಾಡು ವಿಜಯಪುರ ಜಿಲ್ಲೆಯ ಆಲಮೇಲ ಸುತ್ತ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಕುರತ್ತಹಳ್ಳಿ ಹಳ್ಳ, ಕೆರೆ ತುಂಬಿ ಹರಿಯುತ್ತಿದ್ದು ರೈತನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ರೈತ ಬಸವಂತರಾಯ ಅಂಬಾಗೋಳ (55) ಹಳ್ಳದ ನೀರಲ್ಲಿ ಕೊಚ್ಚಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ನಿನ್ನೆ ಆಲಮೇಲ ಸುತ್ತ 72.2 ಮಿ.ಮೀ ಮಳೆಯಾಗಿತ್ತು. ರಾತ್ರಿ ಜಮೀನಿಗೆ ತೆರಳಿ ವಾಪಸ್ ಆಗುತ್ತಿದ್ದ ರೈತ ಬಸವಂತರಾಯ ಅಂಬಾಗೋಳ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆಯಾದರು ಬಸವಂತರಾಯ ಮನೆಗೆ ವಾಪಸ್ ಬರದ ಕಾರಣ ಈ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ರೈತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಹಳ್ಳದ ಸೆಳವಿನಲ್ಲಿ ಸಿಕ್ಕು, ಭೀಮಾ ನದಿಗೆ ಕೊಚ್ಚಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ವಿಜಯನಗರದಲ್ಲಿ ಬಿರುಗಾಳಿಯ ಅಬ್ಬರ: 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ